Sunday, June 7, 2026
Homeತಾಜಾ ಸುದ್ದಿಎರಡು ದಿನದ ಹಿಂದೆ ಖರೀದಿಸಿದ್ದ ಎಲೆಕ್ಟ್ರಿಕ್ ಸ್ಕೂಟರ್ ಚಾರ್ಚ್ ಮಾಡುವಾಗ ಸ್ಫೋಟ: ತಂದೆ ಮಗಳು ಸಜೀವ...

ಎರಡು ದಿನದ ಹಿಂದೆ ಖರೀದಿಸಿದ್ದ ಎಲೆಕ್ಟ್ರಿಕ್ ಸ್ಕೂಟರ್ ಚಾರ್ಚ್ ಮಾಡುವಾಗ ಸ್ಫೋಟ: ತಂದೆ ಮಗಳು ಸಜೀವ ದಹನ

- Advertisement -
- Advertisement -

ತಮಿಳುನಾಡು: ಎರಡು ದಿನಗಳ ಹಿಂದಷ್ಟೇ ಖರೀದಿಸಿದ್ದ ಎಲೆಕ್ಟ್ರಿಕ್ ಸ್ಕೂಟರ್ ಮನೆಯಲ್ಲಿ ಚಾರ್ಜ್ ಮಾಡುವಾಗ ಸ್ಫೋಟಗೊಂಡು ತಂದೆ ಮಗಳು ಸ್ಥಳದಲ್ಲೇ ಸಜೀವ ದಹನವಾಗಿರುವ ಘಟನೆ, ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದಿದೆ.

ದುರೈ ವರ್ಮ(49)  ಹಾಗೂ ಪುತ್ರಿ ಮೋಹನಾ ಪ್ರೀತಿ (13) ಮೃತ ದುರ್ದೈವಿಗಳು. ದುರೈ ವರ್ಮ ಎರಡು ದಿನಗಳ ಹಿಂದಷ್ಟೇ ಖರೀದಿಸಿದ್ದ ಎಲೆಕ್ಟ್ರಿಕ್ ಸ್ಕೂಟರನ್ನು ಚಾರ್ಜ್ ಮಾಡುವ ಸಲುವಾಗಿ ಮನೆಯಲ್ಲಿಯೇ ಚಾರ್ಜಿಂಗ್ ಗೆ ಹಾಕಿದ್ದರು ಎನ್ನಲಾಗಿದೆ. ಚಾರ್ಜ್ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ನೋಡಲು ಹೋದಾಗ ಸ್ಕೂಟರ್ ಸ್ಫೋಟವಾಗಿದೆ. ಪರಿಣಾಮ ತಂದೆ ಮಗಳು ಇಬ್ಬರೂ ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!