Monday, June 8, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಸುದ್ದಿ ಬಿಡುಗಡೆ ಪತ್ರಿಕೆಯ ಇಬ್ಬರ ಸದಸ್ಯತ್ವ ಅಮಾನತು; ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದಿಂದ...

ಬೆಳ್ತಂಗಡಿ : ಸುದ್ದಿ ಬಿಡುಗಡೆ ಪತ್ರಿಕೆಯ ಇಬ್ಬರ ಸದಸ್ಯತ್ವ ಅಮಾನತು; ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದಿಂದ ನಿರ್ಣಯ

- Advertisement -
- Advertisement -

ಬೆಳ್ತಂಗಡಿ : ಸುದ್ದಿ ಸಂಸ್ಥೆಯ ಸಂಪಾದಕ ಡಾ.ಯು.ಪಿ.ಶಿವಾನಂದ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪದೆ ಪದೆ ಸುಳ್ಳು ಸಂಪಾದಕೀಯ ಬರೆಯುತ್ತಾ ಬ್ಲ್ಯಾಕ್ ಮೇಲ್ ಮೂಲಕ ಹೆದರಿಸುತ್ತಾ ಸಮಾಜದ ಜನರ ದಾರಿ ತಪ್ಪಿಸುವ ಚಾಲಿ ಹೊಂದಿದ್ದು ಮತ್ತು ಬೆಳ್ತಂಗಡಿ ತಾಲೂಕು ಪತ್ರಕರ್ತ ಸಂಘದ ಬಗ್ಗೆ ಸುಳ್ಳು ಸಂಪಾದಕೀಯ ಬರೆದ ಕಾರಣದಿಂದ ಬೆಳ್ತಂಗಡಿ ಪತ್ರಕರ್ತ ಸಂಘದ ಸದಸ್ಯರಾಗಿದ್ದ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ಜಾರಪ್ಪ ಪೂಜಾರಿ ಮತ್ತು ವ್ಯವಸ್ಥಾಪಕ ಮಂಜುನಾಥ್ ರೈ ಯನ್ನು ಸಂಘದ ಸದಸ್ಯತ್ವದಿಂದ ಮೇ.3 ರಂದು ಅಮಾನತು ಮಾಡಿದ್ದಾರೆ.

ರಾಜೀನಾಮೆ ಪತ್ರ ಮಾನ್ಯತೆಗೆ ತೆಗೆದುಕೊಂಡಿಲ್ಲ: ಸಂಘದ ಸದಸ್ಯರಾಗಿದ್ದ ಜಾರಪ್ಪ ಪೂಜಾರಿ ಮತ್ತು ಮಂಜುನಾಥ ರೈ ಇಬ್ಬರು ಕೂಡ ಸುದ್ದಿ ಸಂಸ್ಥೆಯ ಸಂಪಾದಕ ಯು.ಪಿ.ಶಿವಾನಂದರ ಕಿರಿಕಿರಿಯಿಂದ ಒತ್ತಾಯ ಪೂರ್ವಕವಾಗಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿ ಏ.22 ರಂದು ಬೆಳ್ತಂಗಡಿ ಪತ್ರಕರ್ತ ಸಂಘದ ಅಧ್ಯಕ್ಷರಿಗೆ ಜಾರಪ್ಪ ಪೂಜಾರಿ ಹೋಗಿ ನೀಡಿದ್ದರು. ಆದ್ರೆ ಈ ಇಬ್ಬರ ರಾಜೀನಾಮೆ ಪತ್ರವನ್ನು ಸಂಘದ ಮೇ.3 ರಂದು ನಡೆದ ಸಭೆಯಲ್ಲಿ ಮಾನ್ಯತೆಗೆ ತೆಗೆದುಕೊಳ್ಳದೆ ಇಬ್ಬರನ್ನು ಎಲ್ಲಾ ಸದಸ್ಯರ ಖಂಡನೆಯಂತೆ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ‌.

ಶಾಶ್ವತ ನಿರ್ಬಂಧ: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸದಸ್ಯತ್ವ ಪಡೆಯಲು ಇನ್ನು ಮುಂದೆ ಬೆಳ್ತಂಗಡಿ ಸುದ್ದಿ ಬಿಡುಗಡೆ ವಾರ ಪತ್ರಿಕೆಯ ಯಾವ ವರದಿಗಾರನನ್ನು ಕೂಡ ಶಾಶ್ವತವಾಗಿ ಸೇರಿಸಿಕೊಳ್ಳದಂತೆ ಸಂಘದ ಪ್ರತಿಯೊಬ್ಬ ಸದಸ್ಯರು ಮೇ.3 ರಂದು ನಡೆಸಿದ ಸಂಘದ ಸಭೆಯಲ್ಲಿ ನಿರ್ಣಯ ಮಾಡಿಕೊಂಡಿದ್ದಾರೆ.

ಪತ್ರಿಕೆಯಲ್ಲಿ ಬೇಷರತ್ ಕ್ಷಮೆ ಕೇಳಲು ಅವಕಾಶ: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸದಸ್ಯತ್ವಕ್ಕೆ ಬೆಳ್ತಂಗಡಿ ಸುದ್ದಿ ಬಿಡುಗಡೆ ವಾರ ಪತ್ರಿಕೆಯ ಯಾವುದೇ ವರದಿಗಾರರು ಸೇರ್ಪಡೆಗೊಳ್ಳಬೇಕಾದಲ್ಲಿ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಬಗ್ಗೆ ಸುಳ್ಳು ಸಂಪಾದಕೀಯ ಬರೆದ ಡಾ.ಯು.ಪಿ.ಶಿವಾನಂದರು ಬಹಿರಂಗವಾಗಿ ಬೇಷರತ್ ಕ್ಷಮೆ ತಮ್ಮ ಪತ್ರಿಕೆಯಲ್ಲಿ ಪ್ರಕಟ ಮಾಡಿದ ಬಳಿಕ ಸಂಘದ ಸದಸ್ಯರು ಸಭೆ ನಡೆಸಿ ತೀರ್ಮಾನ ತೆಗೆದುಕೊಂಡು ಸೇರ್ಪಡೆ ಮಾಡಲಿದ್ದಾರೆ ಎಂದು ಸಭೆಯಲ್ಲಿ ನಿರ್ಣಯವನ್ನು ಮಾಡಿಕೊಂಡಿದ್ದಾರೆ.

- Advertisement -

Latest News

error: Content is protected !!