Saturday, June 1, 2024
Homeಕರಾವಳಿಬೆಳ್ತಂಗಡಿ: ಪ್ರತಿಭಾವಂತ ವಿದ್ಯಾರ್ಥಿಗೆ ಮೊಬೈಲ್ ನೀಡಿ ಪ್ರೋತ್ಸಾಹಿಸಿದ ಉದ್ಯಮಿ ಪುಷ್ಪರಾಜ್ ಶೆಟ್ಟಿ

ಬೆಳ್ತಂಗಡಿ: ಪ್ರತಿಭಾವಂತ ವಿದ್ಯಾರ್ಥಿಗೆ ಮೊಬೈಲ್ ನೀಡಿ ಪ್ರೋತ್ಸಾಹಿಸಿದ ಉದ್ಯಮಿ ಪುಷ್ಪರಾಜ್ ಶೆಟ್ಟಿ

spot_img
- Advertisement -
- Advertisement -

ಬೆಳ್ತಂಗಡಿ: ಕಳೆದ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದ ಮೊಬೈಲ್ ಫೋನ್ ಇಲ್ಲದ ಬಡವಿದ್ಯಾರ್ಥಿಯೊಬ್ಬನಿಗೆ ಬೆಳ್ತಂಗಡಿಯ ಪ್ರಕಾಶ್ ಎಲೆಕ್ಟ್ರಾನಿಕ್ಸ್ ಮಾಲಕರಾದ ಪುಷ್ಪರಾಜ್ ಶೆಟ್ಟಿಯವರು ಅಂಡ್ರಾಯ್ಡ್ ಮೊಬೈಲ್ ನೀಡಿ ವಿದ್ಯಾರ್ಥಿಯ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.

ಕಳೆದ 5 ತಿಂಗಳ ಹಿಂದೆ ಇವನ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದು, ತಂದೆ 6 ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ. ಗೇರುಕಟ್ಟೆಯಲ್ಲಿರುವ ತನ್ನ ಅಜ್ಜನ ಮನೆಯಲ್ಲಿ ವಾಸ್ತವ್ಯವಿದ್ದು, ಕೊರೊನಾ ಮಹಾಮಾರಿಯಿಂದ ಈ ಭಾರಿ ಹತ್ತನೆ ತರಗತಿಯ ಪರೀಕ್ಷೆಗೆ ತಯಾರಿಗಳು ಮೊಬೈಲ್ ಮೂಲಕವೇ ಅಧ್ಯಾಪಕರು ಮಾಡುತ್ತಿದ್ದಾಗ, ತುಂಬಾ ಬಡತನದಲ್ಲಿದ್ದ ಇವನಲ್ಲಿ ಅದಕ್ಕೆ ಪೂರಕವಾದ ಮೊಬೈಲ್ ಇಲ್ಲದಿದ್ದರೂ ತನ್ನ ಸ್ವಂತ ಪ್ರಯತ್ನದಿಂದ ಕಲಿತು 598 ಅಂಕ ಪಡೆದಿದ್ದಾನೆ. ಇವನು ಗುರುವಾಯನಕೆರೆ ಸರಕಾರಿ ಫ್ರೌಢ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ.

ಪುಷ್ಪರಾಜ್ ಶೆಟ್ಟಿಯವರು ಮೊಬೈಲ್ ನೀಡಿ ಆತನ ಮುಂದಿನ ವಿದ್ಯಾಭ್ಯಾಸಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತ ಮಂಜುನಾಥ್ ರೈ , ಲಯನ್ ವಸಂತ ಶೆಟ್ಟಿ, ಜೇಸಿ ಕಿರಣ್ ಶೆಟ್ಟಿ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!