Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಉಜಿರೆಯಲ್ಲಿ ೫ನೇ ವರ್ಷದ ಸಂಭ್ರಮದ ಕೇರಳ ಸಾಂಪ್ರದಾಯಿಕ ವಿಷುಕಣಿ ಆಚರಣೆ- ಶಾಸಕ ಹರೀಶ್...

ಬೆಳ್ತಂಗಡಿ : ಉಜಿರೆಯಲ್ಲಿ ೫ನೇ ವರ್ಷದ ಸಂಭ್ರಮದ ಕೇರಳ ಸಾಂಪ್ರದಾಯಿಕ ವಿಷುಕಣಿ ಆಚರಣೆ- ಶಾಸಕ ಹರೀಶ್ ಪೂಂಜ

- Advertisement -
- Advertisement -

ಬೆಳ್ತಂಗಡಿ: ಕೇರಳ ಭಾಷಿಗರ ಅನೇಕ ಕುಟಯಂಬಗಳು ಬೆಳ್ತಂಗಡಿಯಲ್ಲಿ ವಾಸಿಸುತ್ತಿದ್ದು ತವರು ರಾಜ್ಯದ ಭಾವನೆಯಲ್ಲಿರುವ ಎಂಬ ಕಲ್ಪನೆಯೊಂದಿಗೆ ಕಳೆದ ನಾಲ್ಕು ವರ್ಷಗಳ ಕಾಲ ವಿಷುಕಣಿ ಹಬ್ಬ ಅತ್ಯಂತ ಯಶಸ್ವಿಯಾಗಿ ತಾಲೂಕಿನಲ್ಲಿ ನಡೆಯುತ್ತಾ ಬಂದಿದೆ. ಕೇರಳದ ಸಾಂಪ್ರಾದಾಯಿಕ ವಿಷುಕಣಿ ಸಂಸ್ಕಾರ ಸಂಸ್ಕತಿಯನ್ನು ಪ್ರತಿಬಿಂಬಿಸುವ ಹಬ್ಬ ಇದಾಗಿದ್ದು 5ನೇ ವರ್ಷದ ವಿಷುಕಣಿ ಆಚರಣೆ ಮೇ.17 ರಂದು ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಲಿದ್ದು ಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಮೇ. 12 ರಂದು ಮಂಗಳವಾರ ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ಒಂದು ತಿಂಗಳಿನಿಂದ ಆಚರಣೆಯ ರೂಪುರೇಷಗಳು ಸಿದ್ಧಗೊಂಡು ಪೂರ್ವ ತಯಾರಿ ನಡೆಸಲಾಗುತ್ತಿದೆ.

ಬೆಳ್ತಂಗಡಿಯಲ್ಲಿ ಧರ್ಮಸ್ಥಳ, ಉಜಿರೆ, ಲಾಯಿಲ ಜಿ.ಪಂ. ವ್ಯಾಪ್ತಿಯಲ್ಲಿ ಅಧಿಕ ಕೇರಳ ಭಾಷಿಗರು ವಾಸವಿದ್ದಾರೆ. ಕಾರ್ಯಕ್ರಮದಲ್ಲಿ ವಿಶೇಷವಾಗಿ ಕೇರಳ ಚೆಂಡೆ ಪ್ರದರ್ಶನ, ಪೂಕಳಂ, ಕೇರಳ ಹಾಗೂ ಅಂತಾರಾಜ್ಯ ಕಲಾವಿದರಿಂದ ಸಾಂಸ್ಕೃತಿಕ ವೈವಿಧ್ಯ, ಕೇರಳದ ಸಾಂಪ್ರದಾಯಿಕ ಶೈಲಿಯ ೩೨ ಬಗೆಯ ಉಟೋಪಚಾರ ಇರಲಿದೆ. ಈ ಬಾರಿ ಐದನೇ ವರ್ಷದ ಆಚರಣೆ ನಡೆಯುತ್ತಿರುವುದರಿಂದ ಮೂರು ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ಶಾಸಕರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ವಿಷು ಕಣಿ ಆಚರಣಾ ಸಮಿತಿಯ ಪದಾಧಿಕಾರಿಗಳಾದ ಪ್ರಸಾದ್, ನೈಮಿಷಾ, ಅನಿಲ್ ಕುಮಾರ್ ಹಾಗೂ ದೀವಿನೇಶ್ ಉಪಸ್ಥಿತರಿದ್ದರು.

- Advertisement -

Latest News

error: Content is protected !!