Thursday, August 6, 2026
Homeಕರಾವಳಿಬೆಳ್ತಂಗಡಿ : ಶಾಲಾ ಮಕ್ಕಳ ಬಸ್ ತಪಾಸಣೆ ಮಾಡಿದ ಆರ್.ಟಿ.ಓ ಮತ್ತು ಸಂಚಾರಿ ಪೊಲೀಸರು

ಬೆಳ್ತಂಗಡಿ : ಶಾಲಾ ಮಕ್ಕಳ ಬಸ್ ತಪಾಸಣೆ ಮಾಡಿದ ಆರ್.ಟಿ.ಓ ಮತ್ತು ಸಂಚಾರಿ ಪೊಲೀಸರು

- Advertisement -
- Advertisement -

ಬೆಳ್ತಂಗಡಿ : ಮಕ್ಕಳು ದೇಶದ ಅಮೂಲ್ಯ ರತ್ನಗಳು. ಅಂತಹ ಮಕ್ಕಳನ್ನು ಪ್ರತಿದಿನ ಸುರಕ್ಷಿತವಾಗಿ ಶಾಲೆಗೆ ಕರೆತಂದು, ಮರಳಿ ಮನೆಗೆ ತಲುಪಿಸುವ ಶಾಲಾ ವಾಹನಗಳು ಮಕ್ಕಳ ಸುರಕ್ಷತೆಯ ಕಾವಲುಗಾರರು ಹಾಗಾಗಿ  ಬೆಳ್ತಂಗಡಿ ಸಂಚಾರಿ ಠಾಣಾ ಪೊಲೀಸರು ಹಾಗೂ ಬಂಟ್ವಾಳ ವಿಭಾಗ ಸಾರಿಗೆ ಇಲಾಖೆ ಜಂಟಿಯಾಗಿ ಆ.6 ರಂದು ಶಾಲಾ ವಾಹನಗಳ ತಪಸಾಣೆ ನಡೆಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 73ರ  ಬೆಳ್ತಂಗಡಿ ಮತ್ತು ಉಜಿರೆ ಭಾಗದಲ್ಲಿ  ವಾಹನಗಳ ತಪಾಸಣೆ ನಡೆಸಿದ ಅಧಿಕಾರಿಗಳು  ಶಾಲಾ ವಾಹನಗಳ ಸರ್ಮಪಕ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಇದಾಗಿಯೂ ಚಾಲಕರಿಗೆ ಸುರಕ್ಷತೆ, ವಾಹನಗಳ ಪಿಟ್ನೆಸ್, ಸಂಚಾರ ನಿಯಮಗಳು ಬಗ್ಗೆ ಮಾಹಿತಿಯನ್ನು ವಿವರಿಸಿದರು. ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಕಿಶೋರ್.ಪಿ ತಂಡ ಮತ್ತು ಬಂಟ್ವಾಳ ಸಾರಿಗೆ ಇಲಾಖೆ ಇನ್ಸ್‌ಪೆಕ್ಟರ್ ಪ್ರಮೋದ್ ಭಟ್ ತಂಡ ಉಪಸ್ಥಿತರಿದ್ದರು.

- Advertisement -

Latest News

error: Content is protected !!