- Advertisement -
- Advertisement -
ಬೆಳ್ತಂಗಡಿ: ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಲ್ನ ನದಿ ಕಿನಾರೆಯಲ್ಲಿ ಕಿಡಿಗೇಡಿಗಳು ನದಿಗೆ ವಿಷ ಹಾಕಿದ್ದರಿಂದ ಹಲವಾರು ಮೀನುಗಳು ಮತ್ತು ನವಿಲೊಂದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಯ ಉಪ ನೀರೀಕ್ಷಕ ಓಡಿಯಪ್ಪ ಗೌಡರ ತಂಡ ಮೂವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ನೆರಿಯಾ ಹಟ್ಟಾಡಿ ನಿವಾಸಿಗಳಾದ ಹನೀಫ್, ರಫೀಕ್, ಅಶ್ರಫ್ ಬಂಧಿತ ಮೂವರು.
ಮಾ.30ರಂದು ರಾತ್ರಿ ನದಿ ನೀರಿಗೆ ವಿಷ ಹಾಕಿದ್ದರಿಂದ ಸುಮಾರು 2 ಕಿ.ಮೀ. ವ್ಯಾಪ್ತಿಯ ಮೀನುಗಳು ಸಾವನ್ನಪ್ಪಿತ್ತು. ಸ್ಥಳಕ್ಕೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿ ತನಿಖೆ ಕೈಗೊಂಡು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
- Advertisement -