Tuesday, September 10, 2024
Homeಕರಾವಳಿದ.ಕ ಜಿಲ್ಲೆಯಲ್ಲಿ ಒಂದೇ ದಿನ 3 ಕೊರೋನಾ ಪ್ರಕರಣ: ಸೋಂಕಿತರ ಸಂಖ್ಯೆ 12ಕ್ಕೆ

ದ.ಕ ಜಿಲ್ಲೆಯಲ್ಲಿ ಒಂದೇ ದಿನ 3 ಕೊರೋನಾ ಪ್ರಕರಣ: ಸೋಂಕಿತರ ಸಂಖ್ಯೆ 12ಕ್ಕೆ

spot_img
- Advertisement -
- Advertisement -

ಮಂಗಳೂರು,ಏ 04 : ಕಳೆದ 2 ದಿನಗಳಿಂದ ಕೊರೋನಾ ಪಾಸಿಟಿವ್ ಆಗದ್ದೆ ಶಾಂತವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಂದೇ ದಿನ 3 ಜನರಿಗೆ ಕೊರೋನಾ ಪ್ರಕರಣ ಇರುವುದು ದೃಢ ಪಟ್ಟಿದೆ. ಹೀಗಾಗಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12 ಏರಿದೆ.
ದೆಹಲಿಗೆ ನಮಾಜ್ ಗೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ. ಇನ್ನು ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲಿಫ್-ಎ-ಜಮಾತ್ ಧಾರ್ಮಿಕ ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಸದ್ಯದ ಪ್ರಕಾರ 29 ಭಾಗವಹಿಸಿದ ಬಗ್ಗೆ ಮಾಹಿತಿ ಇದ್ದು 9 ಜನರ ವರದಿ ಬಂದಿದ್ದು 2 ಪಾಸಿಟಿವ್ ಆಗಿದೆ.

ಉಳಿದ 20 ಜನರ ವರದಿಗಾಗಿ ಜಿಲ್ಲಾಡಳಿತ ನೀರಿಕ್ಷೆಯಲ್ಲಿದೆ. ದೆಹಲಿಗೆ ತೆರಳಿದ್ದ ಓರ್ವ ಯುವಕ ತುಂಬೆಯ ಮದಕ ಬೊಳ್ಳಾಡಿ ಪ್ರದೇಶದ ನಿವಾಸಿಯಾಗಿದ್ದು , ಈ ಗ್ರಾಮದಲ್ಲಿ 500ಕ್ಕೂ ಮನೆಗಳಿವೆ. ತಹಶೀಲ್ದಾರ್ ಮತ್ತು ಎಸ್ ಐ ಸ್ಥಳಕ್ಕೆ ಆಗಮಿಸಿದ್ದು ತುಂಬೆ ಗ್ರಾಮವನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಯಾರು ಮನೆಯಿಂದ ಹೊರಬಾರದಂತೆ ಪೊಲೀಸರು ಧ್ವನಿವರ್ಧಕ ಮೂಲಕ ಎಚ್ಚರಿಕೆಯ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.

ಇದಲ್ಲದೆ ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದು ಕ್ವಾರೇಂಟೇನ್ ನಲ್ಲಿದ್ದ ವ್ಯಕ್ತಿಗೂ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಕಿಂತರ ಸಂಖ್ಯೆ 12 ಏರಿಕೆಯಾಗಿದೆ.

- Advertisement -
spot_img

Latest News

error: Content is protected !!