Monday, May 13, 2024
Homeಅಪರಾಧಬೆಳ್ತಂಗಡಿಯಲ್ಲಿ ಒಬ್ಬಂಟಿ ಕಳ್ಳನಿಂದ ಮತ್ತೆ ಕಳ್ಳತನ: ಸಿಸಿಕ್ಯಾಮರದಲ್ಲಿ ಮಿಡ್ ನೈಟ್ ಕಳ್ಳನ ಕಸರತ್ತು ಸೆರೆ

ಬೆಳ್ತಂಗಡಿಯಲ್ಲಿ ಒಬ್ಬಂಟಿ ಕಳ್ಳನಿಂದ ಮತ್ತೆ ಕಳ್ಳತನ: ಸಿಸಿಕ್ಯಾಮರದಲ್ಲಿ ಮಿಡ್ ನೈಟ್ ಕಳ್ಳನ ಕಸರತ್ತು ಸೆರೆ

spot_img
- Advertisement -
- Advertisement -

ಬೆಳ್ತಂಗಡಿ: ಕೆಲ ತಿಂಗಳಿನಿಂದ ಬೆಳ್ತಂಗಡಿ ನಗರದ ಸುತ್ತಮುತ್ತ ಕಳ್ಳತನ ನಡೆಯುತ್ತಿದ್ದು ಇದರಿಂದ ಅಂಗಡಿ ಮಾಲೀಕರು ಅಂತಕದಲ್ಲಿರುವ ನಡುವೆ ಇದೀಗ ಮತ್ತೆ ಕಳ್ಳತನ ಕೃತ್ಯ ನಡೆದಿದೆ.

ಕ್ರೀ ಪಾರ್ಲರ್ ನಲ್ಲಿ ಹಣ ಕಳ್ಳತನ:
ಬೆಳ್ತಂಗಡಿ ನಗರದ ಹಳೆಕೋಟೆ ಆಧ್ಯಾ ಕಾಂಪ್ಲೆಕ್ಸ್ ನಲ್ಲಿರುವ ಕರುಣಾಕರ ಎಂಬವರ ಮಾಲೀಕತ್ವದ ‘ದಿ ಐಸ್ ವಲ್ಡ್ ಕಾಫಿ ‘ ಎಂಬ ಹೆಸರಿನ ಶಾಪ್ ಗೆ ಜ.15 ರ ಭಾನುವಾರ ಬೆಳಗ್ಗಿನ ಜಾವ 5:56 ಕ್ಕೆ ಶಟರ್ ಬೀಗ ಮುರಿದು ಒಳನುಗ್ಗಿದ ಒಬ್ಬಂಟಿ ಕಳ್ಳ ಕಪಾಟಿನಲ್ಲಿದ್ದ ಸುಮಾರು 5,000/- ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾನೆ. ಕಳ್ಳತನ ಮಾಡುವ ಸಂಪೂರ್ಣ ದೃಶ್ಯ ಶಾಪ್ ಒಳಗಿನ ಸಿಸಿಕ್ಯಾಮರದಲ್ಲಿ ಸೆರೆಯಾಗಿದೆ. ಈ ಕಳ್ಳತನ ಪ್ರಕರಣ ಸಂಬಂಧ ಶಾಪ್ ಮಾಲೀಕರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಎರಡು ಕಳ್ಳತನ ಪ್ರಕರಣದ ಕಳ್ಳ ಆರೋಪಿ ಬೇರೆ ಬೇರೆ ?:
ಬೆಳ್ತಂಗಡಿ ಬಸ್ ನಿಲ್ದಾಣದ ಸಮೀಪವಿರುವ ಗಾರ್ಡನ್ ಬಾರ್ ಬಳಿಯ ಬಿರ್ಮೋಟ್ಟು ಮೋಟಾರ್ ಡ್ರೈವಿಂಗ್ ಸ್ಕೂಲ್ ಗೆ ಜ.12 ರಂದು ಮಧ್ಯರಾತ್ರಿ ಸುಮಾರು 1:56 ಗಂಟೆಗೆ ಶಟರಿನ ಬೀಗಮುರಿದು ಒಳನುಗ್ಗಿ ಹಣಕ್ಕಾಗಿ ದಾಖಲೆಗಳನ್ನು ಮತ್ತು ಕಪಾಟುಗಳನ್ನು ಜಾಲಾಡಿದ್ದು ಅಲ್ಲಿ ಏನೂ ಸಿಗದೆ ಕೊನೆಗೆ ಬರಿಗೈಯಲ್ಲಿ ವಾಪಸ್ ಹೋಗಿದ್ದ.ಈ ಬಗ್ಗೆ ಸ್ಥಳೀಯ ಅಂಗಡಿಯ ಸಿಸಿಕ್ಯಾಮರದಲ್ಲಿ ಕಳ್ಳನ ಚಲನವಲನ ಪತ್ತೆಯಾಗಿತ್ತು ಆದ್ರೆ ಹಳೆಕೋಟೆ ಐಸ್ ಪಾರ್ಲರ್ ಶಾಪ್ ಗೆ ಜ.15 ಬೆಳಗ್ಗಿನ ಜಾವ 5:56 ಕ್ಕೆ ನುಗ್ಗಿದ ಕಳ್ಳನ ಸಿಸಿಕ್ಯಾಮರ ದೃಶ್ಯ ಕೂಡ ಪತ್ತೆಯಾಗಿದ್ದು ಎರಡು ಕಳ್ಳತನ ಪ್ರಕರಣದಲ್ಲಿ ಕಳ್ಳ ಬೇರೆ ಬೇರೆ ರೀತಿಯಲ್ಲಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಕಳ್ಳತನ ಯತ್ನ ನಡೆದರೂ ದೂರು ನೀಡದ ಅಂಗಡಿ ಮಾಲೀಕರು:
ಯಾವುದೇ ಅಂಗಡಿಗೆ ಕಳ್ಳತನ ಯತ್ನ ನಡೆಸಿದರೂ ಈ ಬಗ್ಗೆ ತಲೆಕೆಡಿಸಿಕೊಳ್ಳದ ಅಂಗಡಿ ಮಾಲೀಕರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಹಿಂದೆಟ್ಟು ಹಾಕುತ್ತಿದ್ದಾರೆ. ಲಾಯಿಲ, ಉಜಿರೆ, ಗುರುವಾಯನಕೆರೆಯಲ್ಲಿ ಇತ್ತಿಚೆಗೆ ಅಂಗಡಿಯ ಶಟರ್ ಬೀಗ ಮುರಿದು ಅಂಗಡಿಯಲ್ಲಿ ಕಳ್ಳತನ ಯತ್ನ ನಡೆಸಿದ್ದರೂ ಈ ವರೆಗೂ ಯಾವುದೇ ಕಳ್ಳತನ ನಡೆದಿಲ್ಲ ಎಂದು ದೂರು ನೀಡದೆ ಸುಮ್ಮನಿದ್ದಾರೆ. ಇದರಿಂದ ಕಳ್ಳನ ಪತ್ತೆಗೆ ಪೊಲೀಸರ ತೊಂದರೆಯಾಗುತ್ತಿದೆ. ಅಂಗಡಿ ಮಾಲೀಕರು ಕಳ್ಳತನ ಯತ್ನ ನಡೆದರೂ ತಕ್ಷಣ ಸಂಬಂಧ ಪಟ್ಟ ಪೊಲೀಸ್ ಠಾಣೆಗೆ ಹೋಗಿ ದೂರು ಅರ್ಜಿ ನೀಡಬೇಕು ಇದರಿಂದ ಕಳ್ಳ ಮುಂದಿನ ದಿನಗಳಲ್ಲಿ ಬಂಧನವಾದಾಗ ಪೊಲೀಸರಿಗೆ ವಿಚಾರಣೆಗೆ ಸಹಕಾರಿಯಾಗಲಿದೆ

ಪೊಲೀಸರ ನಿದ್ದೆಗೆಡಿಸುತ್ತಿರುವ ಕಳ್ಳರು:
ಕಳ್ಳತನ ನೋಡಿದ್ರೆ ಪರಿಣಿತಿ ಹೊಂದಿರುವವರೆ ಕೃತ್ಯ ನಡೆಸುತ್ತಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದ್ದು ಕಳ್ಳನ ಪತ್ತೆಗಾಗಿ ರಾತ್ರಿ ಹಗಲು ಪೊಲೀಸರು ನಿದ್ದೆ ಬಿಟ್ಟು ಹುಡುಕಾಟ ನಡೆಸುತ್ತಿದ್ದು ಕಳ್ಳ ಮಾತ್ರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ಕಣ್ಣಮುಚ್ಚಲೆ ಆಟವಾಡಿ ಕಳ್ಳತನ ನಡೆಸುತ್ತಿರುವುದು ಬೆಳ್ತಂಗಡಿ ಪೊಲೀಸರಿಗೆ ತಲೆನೋವು ತಂದಿದ್ದು. ಈ ಕಳ್ಳರನ್ನು ಪತ್ತೆಗೆ ಪೊಲೀಸರ ಜೊತೆ ಸಾರ್ವಜನಿಕರು ಕೂಡ ಸಹಕಾರ ಅಗತ್ಯವಿದೆ.

- Advertisement -
spot_img

Latest News

error: Content is protected !!