Thursday, June 25, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಪಡಂಗಡಿ ಎನ್.ಐ.ಎ ದಾಳಿ ಪ್ರಕರಣ;ಎನ್.ಐ.ಎ ಅಧಿಕಾರಿಗಳ ಕಾರ್ಯಾಚರಣೆ ಮುಕ್ತಾಯ

ಬೆಳ್ತಂಗಡಿ : ಪಡಂಗಡಿ ಎನ್.ಐ.ಎ ದಾಳಿ ಪ್ರಕರಣ;ಎನ್.ಐ.ಎ ಅಧಿಕಾರಿಗಳ ಕಾರ್ಯಾಚರಣೆ ಮುಕ್ತಾಯ

- Advertisement -
- Advertisement -

ಬೆಳ್ತಂಗಡಿ : ಬೆಳ್ಳಾರೆ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ನಾಪತ್ತೆಯಾಗಿರುವ ನೌಷಾದ್ ಮನೆ ಮೇಲೆ ಎನ್.ಐ.ಎ ಅಧಿಕಾರಿಗಳು ನಡೆಸಿದ ದಾಳಿ ಮುಕ್ತಾಯವಾಗಿದೆ. ಮನೆಯಲ್ಲಿ ಮಹಜರು ನಡೆಸಿ ಚೆನ್ನೈನಿಂದ ಬಂದ ಡಿವೈಎಸ್ಪಿ ವಿಘ್ನೇಶ್ ಮತ್ತು  ಇಬ್ಬರು ಸಿಬ್ಬಂದಿ ತೆರಳಿದ್ದಾರೆ. 2-30ಕ್ಕೆ ಎನ್ ಐಎ ದಾಳಿ ಅಂತ್ಯವಾಗಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಸಿಬ್ಬಂದಿ  ಪಾಲಣಿವೇಲು, ಆನಂದ್ ಗೌಡ, ಸುಕನ್ಯ ಎನ್ ಐ ಎ ಅಧಿಕಾರಗಳಿಗೆ ಸಹಕರಿಸಿದ್ದರು.ಇನ್ನು ಎನ್.ಐ.ಎ ದಾಳಿ ಸುಳಿವು ಸಿಕ್ಕ ಕೂಡಲೇ ನೌಷಾದ್  ಪತ್ನಿ, ತಂಗಿ, ತಾಯಿ ಪರಾರಿಯಾಗಿದ್ದರು. ಬಳಿಕ ತಂಗಿ, ತಾಯಿ ವಶಕ್ಕೆ ಪಡೆದುಕೊಂಡು ಮನೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ.

ಸತತ ಐದು ಗಂಟೆಗಳ ಬಳಿಕ ಎನ್.ಐ.ಎ ಅಧಿಕಾರಿಗಳು ತಂಗಿ ಮತ್ತು ತಾಯಿಯನ್ನು 12 ಗಂಟೆ ಸುಮಾರಿಗೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮದಡ್ಕ ಮನೆಯೊಂದರಲ್ಲಿರುವ ಬಗ್ಗೆ ಮಾಹಿತಿ ಆಧಾರಿಸಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡು ಇನೋವಾ ಕಾರಿನಲ್ಲಿ ನೌಷದ್ ಪೊಯ್ಯಗುಡ್ಡೆ ಮನೆಗೆ ಕರೆತಂದು ಬೀಗ ತೆರೆಸಿ ಮನೆಯೊಳಗೆ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!