- Advertisement -
- Advertisement -
ಪುತ್ತೂರು: ಅನ್ಯಮತೀಯ ವ್ಯಕ್ತಿಯೊಬ್ಬ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿಯ ನಾಗ ದೇವರ ಸನ್ನಿಧಿಗೆ ಹಾನಿ ಮಾಡಿದ ಘಟನೆ ಡಿ.4ರ ಬುಧವಾರದಂದು ರಾತ್ರಿ ನಡೆದಿದ್ದು, ಈತನನ್ನು ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ನಾಗ ದೇವರ ಸನ್ನಿಧಿಯ ಆವರಣಕ್ಕೆ ಹಾನಿ ಮಾಡಿದವನು ಜಿಡೆಕಲ್ಲು ನಿವಾಸಿ ಸಲಾಂಎನ್ನಲಾಗಿದೆ.
ಈತನು ನಾಗ ದೇವರ ಸನ್ನಿಧಿಗೆ ರಾತ್ರಿ ವೇಳೆಯಲ್ಲಿ ತೆರಳಿದ್ದು, ಆವರಣಕ್ಕೆ ಅಳವಡಿಸಿದ ಕಬ್ಬಿಣದ ಗ್ರಿಲ್ಸ್ ತೆರವು ಮಾಡಿ ಒಳ ಹೋಗುವುದನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು, ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
- Advertisement -