Wednesday, June 3, 2026
Homeಕರಾವಳಿಬೆಳ್ತಂಗಡಿ: ಮದುವೆಯೇ ಆಗಿಲ್ಲವೆಂದು ನಂಬಿಸಿ ಮೂರನೇ ಮದುವೆಯಾದ ವ್ಯಕ್ತಿ

ಬೆಳ್ತಂಗಡಿ: ಮದುವೆಯೇ ಆಗಿಲ್ಲವೆಂದು ನಂಬಿಸಿ ಮೂರನೇ ಮದುವೆಯಾದ ವ್ಯಕ್ತಿ

- Advertisement -
- Advertisement -

ಬೆಳ್ತಂಗಡಿ: ತನಗೆ ಮದುವೆಯೇ ಆಗಿಲ್ಲವೆಂದು ನಂಬಿಸಿ ಮೂರನೇ ಮದುವೆಯಾಗಿ ಇದೀಗ ಮೂರನೇ ಪತ್ನಿಗೂ ದೈಹಿಕವಾಗಿ ಹಿಂಸಿಸಿ, ಜೀವಬೆದರಿಕೆ ಹಾಕಿದ ಘಟನೆ ಪೊಲೀಸ್ ಠಾಣಾ ವ್ಯಾಪ್ತಿಯ ಲಾಯಿಲದಲ್ಲಿ ನಡೆದಿದೆ.

ಲಾಯಿಲದ ಕಕ್ಕೇನ ನಿವಾಸಿ ಮಹಿಳೆ ನೀಡಿದ ದೂರಿನಂತೆ ಎಲ್. ಮಂಜುನಾಥ್ ಲಾಯಿಲ ಎಂಬವರ ಮೇಲೆ ಬೆಳ್ತಂಗಡಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ತನಗೆ ಮದುವೆಯಾಗಿಲ್ಲವೆಂದು ಮಂಜುನಾಥ ನಂಬಿಸಿ ಮೋಸದಿಂದ 2016 ನೇ ಇಸವಿಯಲ್ಲಿ ಮದುವೆಯಾಗಿ ಬಳಿಕ 2 ಲಕ್ಷ ಹಣ ಹಾಗೂ ಬ್ಯಾಂಕಿನಿಂದ 3 ಲಕ್ಷ ಸಾಲ ಪಡೆದು ವ್ಯವಹಾರ ಪ್ರಾರಂಭಿಸಿ ಅದರಿಂದ ಬಂದ ಹಣವನ್ನು ಪಿರ್ಯಾದಿದಾರರಿಗೆ ನೀಡದೇ ತನ್ನ ಮೊದಲ ಎರಡು ಪತ್ನಿಯರಿಗೆ ನೀಡುತ್ತಿದ್ದುದ್ದನ್ನು ಪಪ್ರಶ್ನಿಸಿದ್ದಕ್ಕೆ ನಾನ ರೀತಿಯ ಹಿಂಸೆ ನೀಡಿ ತೊಂದರೆ ನೀಡಿದ್ದಲ್ಲದೇ ಜೀವ ಬೆದರಿಕೆ ಒಡ್ಡಿರುವುದಾಗಿದೆ. ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ.48/2020 ಕಲಂ: 417,420,506,498(ಎ) IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

- Advertisement -

Latest News

error: Content is protected !!