Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಕಿನ್ಯಮ್ಮ ಸಭಾಭವನದ  ಪರವಾನಿಗೆ ರದ್ದು ಪ್ರಕರಣ; ನೋಟಿಸ್ ಹಿಂಪಡೆದ ಪಟ್ಟಣ ಪಂಚಾಯತ್

ಬೆಳ್ತಂಗಡಿ : ಕಿನ್ಯಮ್ಮ ಸಭಾಭವನದ  ಪರವಾನಿಗೆ ರದ್ದು ಪ್ರಕರಣ; ನೋಟಿಸ್ ಹಿಂಪಡೆದ ಪಟ್ಟಣ ಪಂಚಾಯತ್

- Advertisement -
- Advertisement -

ಬೆಳ್ತಂಗಡಿ : ಸರಕಾರದ ಜಾಮೀನಿನಲ್ಲಿ ಸಭಾಭವನ ನಿರ್ಮಾಣ ಮಾಡಿರುವ ಕಾರಣದಿಂದ ಪಟ್ಟಣ ಪಂಚಾಯತ್ ಅಧಿಕಾರಿಗಳುಬೆಳ್ತಂಗಡಿಯ ಜೈನ್ ಪೇಟೆಯಲ್ಲಿರುವ ಕೆಲ್ಲಗುತ್ತು ಕಿನ್ಯಮ್ಮ ಯಾನೆ ಗುಣಾವತಿ ಅಮ್ಮ ಸಭಾಭವನದ ಉದ್ದಿಮೆ ಪರವಾನಿಗೆಯನ್ನು ಜ.29 ರಂದು ರದ್ದು ಮಾಡಿದ ನೋಟಿಸನ್ನು ಹಿಂಪಡೆದಿರುವುದಾಗಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮತ್ತೋಂದು ನೋಟಿಸ್ ನಲ್ಲಿ ಜ.31 ರಂದು ತಿಳಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಪ್ರಥಮ ದರ್ಜೆ ಕಾಲೇಜ್ ರಸ್ತೆಯ, ಜೈನ್ ಪೇಟೆಯಲ್ಲಿರುವ ಸ.ನಂ 64/14 ರಲ್ಲಿ 4.31 ಎಕ್ರೆ ಸರಕಾರಿ ಜಾಮೀನಿನಲ್ಲಿ  ಕೆಲ್ಲಗುತ್ತು ಕಿನ್ಯಮ್ಮ ಯಾನೆ ಗುಣಾವತಿ ಅಮ್ಮ ಸಭಾಭವನ ನಿರ್ಮಾಣ ಮಾಡಿರುವ ಬಗ್ಗೆ ಹರಿಪ್ರಸಾದ್ ಎಂಬವರು ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ಸೂಕ್ತ ದಾಖಲೆಗಳ ಬಗ್ಗೆ ಕೆ.ಜಯವರ್ಮ ರಾಜ ಬಲ್ಲಾಳ್ ಎಂಬವರಿಗೆ ಜ‌.29 ರಂದು ನೋಟಿಸ್ ಜಾರಿ ಮಾಡಿದ್ದರು.‌

ಈ ಬಗ್ಗೆ ಸಭಾಭವನದ ಪಹಣಿ ಪತ್ರವನ್ನು ಪಟ್ಟಣ ಪಂಚಾಯತ್ ಗೆ ನೀಡಿದಾಗ ಅದರಲ್ಲಿ ಸಭಾಭವನ ಸರಕಾರ ಎಂದು ನಮೂದು ಮಾಡಿರುವುದು ಕಂಡು ಬಂದಿದೆ ಎಂದು ಸಭಾಭವನಕ್ಕೆ ನೀಡಿದ ಉದ್ದಿಮೆ ಪರವಾನಿಗೆಯನ್ನು  ಪಟ್ಟಣ ಪಂಚಾಯತ್ ರದ್ದು ಪಡಿಸಿದೆ ಎಂದು ಮುಖ್ಯಾಧಿಕಾರಿ ಜ.29 ರಂದು ಬೆಳಿಗ್ಗೆ  ನೋಟೀಸ್ ಹೊರಡಿಸಿದ್ದರು.

ನೋಟಿಸ್ ಹಿಂಪಡೆದ ಪಟ್ಟಣ ಪಂಚಾಯತ್:  ಅದೇ ದಿನ ಜಯವರ್ಮ ರಾಜ ಬಲ್ಲಾಳ್ ಪರ ಬೆಳ್ತಂಗಡಿ ಪಟ್ಟಣ ಪಂಚಾಯತ್ ಗೆ ದಾಖಲೆ ನೀಡಲಾಗಿದೆ. ಇದನ್ನು ಪರೀಶೀಲನೆ ಮಾಡಿದ  ಮುಖ್ಯಾಧಿಕಾರಿಯವರು ಈ ಹಿಂದೆ ನೀಡಿದ್ದ ಆದೇಶವನ್ನು ಹಿಂಪಡೆದಿರುವುದಾಗಿ ತಿಳಿಸಿ ಮತ್ತೊಂದು ಆದೇಶ ಹೊರಡಿಸಿದ್ದಾರೆ.

ಆದೇಶದಲ್ಲಿ ಏನಿದೆ?: ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಸ.ನಂ. 68/14ರಲ್ಲಿ 4.31 ಎಕ್ರೆ ಜಾಗವನ್ನು “ಬಸದಿ ಪರಂಬೋಕು” ಎಂಬುದಾಗಿ ಮೀಸಲಿರಿಸಿದ ಬಗ್ಗೆ ಕಂದಾಯ ಇಲಾಖೆಯ ಸರ್ವ ಮತ್ತು ಸೆಟ್ಗಮಂಟ್ ರಿಜಿಸ್ತಿಯಲ್ಲಿ ಪಟ್ಟಾದಾರನ ನಂಬ ಮತ್ತು ಹೆಸರಿನ ಕಾಲಂನಲ್ಲಿ “ಶಾಂತೇಶ್ವರ ದೇವಸ್ಥಾನದ ಪ್ರಕೃತ ಆಡಳೆದಾರರು” ಎಂದು ದಾಖಲಾಗಿದ್ದು, ಪಹಣಿಯ ಕಾಲಂ ನಂಬ್ರ 11 ರಲ್ಲಿ ನಮೂದಾಗಿರುವ ಬಗ್ಗೆ ಕಂದಾಯ ಇಲಾಖೆಯ ಸರ್ವೆ ಮತ್ತು ಸೆಟ್ಟೆಮಂಟ್ ರಿಜಿಸ್ಟ್ರಿಯ ನಕಲು ಪ್ರತಿಯನ್ನು ಒದಗಿಸಿರುತ್ತೀರಿ. ಆದುದರಿಂದ ತಮಗೆ ಈ ಕಛೇರಿಯ ದಿನಾಂಕ ಜ.29ರ ನೋಟೀಸು ಸಂಖ್ಯೆ:ಪ.ಪಂ.ಬೆ.1ಸಿ.ಆರ್/ನೋಟೀಸು/2025-26ರ ನೋಟೀಸನ್ನು ಹಿಂಪಡೆಯಲಾಗಿದೆ ಎಂದು ಪಟ್ಟಣ ಪಂಚಾಯತು ಮುಖ್ಯಾಧಿಕಾರಿ ನೋಟಿಸಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!