Friday, May 17, 2024
Homeಕರಾವಳಿಲೆಕ್ಕ ಕೊಡಿ .. ಲೆಕ್ಕ ಕೊಡಿ.. ಕಾಳಜಿ ಫಂಡ್ ನ ಲೆಕ್ಕ ಕೊಡಿ ಎಂದ ಕಾಂಗ್ರೆಸ್...

ಲೆಕ್ಕ ಕೊಡಿ .. ಲೆಕ್ಕ ಕೊಡಿ.. ಕಾಳಜಿ ಫಂಡ್ ನ ಲೆಕ್ಕ ಕೊಡಿ ಎಂದ ಕಾಂಗ್ರೆಸ್ ಪಕ್ಷಕ್ಕೆ ಲೆಕ್ಕ ಕೊಟ್ಟ ಕಾಳಜಿ ಬೆಳ್ತಂಗಡಿಯ ಕಾರ್ಯದರ್ಶಿ

spot_img
- Advertisement -
- Advertisement -

ಬೆಳ್ತಂಗಡಿ: ತಾಲೂಕಿನಲ್ಲಿ ಕಳೆದ ವರ್ಷ ಸಂಭವಿಸಿದ ಭಾರೀ ಪ್ರವಾಹ ಹಾಗೂ ಭೂ ಕುಸಿತದ ಸಂದರ್ಭ ಶಾಸಕ ಹರೀಶ್ ಪೂಂಜರು ‘ಕಾಳಜಿ ಫಂಡ್’ ಹೆಸರಿನಲ್ಲಿ ಸಾರ್ವಜನಿಕರಿಂದ ದೊಡ್ಡ ಮಟ್ಟದಲ್ಲಿ ಹಣ ಸಂಗ್ರಹ ಮಾಡಿದ್ದಾರೆ. ಇದೀಗ ಒಂದು ವರ್ಷ ಕಳೆದರೂ ಅದರಿಂದ ಯಾರಿಗೂ ಒಂದು ರೂ. ಕೂಡಾ ವಿತರಿಸಿಲ್ಲ. ಇದರಲ್ಲಿ ಭಾರೀ ಅವ್ಯವಹಾರವಾಗಿದ್ದು, ಈ ಬಗ್ಗೆ ತನಿಖೆ ಆಗಬೇಕು ಎಂದು ಕೆಲದಿನಗಳ ಹಿಂದೆ ಮಾಜಿ ಶಾಸಕ ಮತ್ತು ಕಾಂಗ್ರೆಸ್ ನಾಯಕ ಕೆ.ವಸಂತ ಬಂಗೇರ ಒತ್ತಾಯಿಸಿದ್ದರು.

ಬೆಳ್ತಂಗಡಿ ಪ್ರವಾಸಿತಾಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಳಜಿ ಬೆಳ್ತಂಗಡಿ ಫ್ಲಡ್ ರಿಲೀಫ್ ಫಂಡ್ ನ ಕಾರ್ಯದರ್ಶಿ ವಕೀಲರಾದ ಬಿ.ಕೆ. ಧನಂಜಯ ರಾವ್ ಮತ್ತು ಕೋಶಾಧಿಕಾರಿ ನಂದಕುಮಾರ್ ಯು.ಟಿಯವರು ಕೆನೆರಾ ಬ್ಯಾಂಕ್ ನ ಅಧಿಕೃತ ಮುದ್ರೆಯೊಂದಿಗೆ ಕಾಳಜಿ ಫಂಡ್ ನ ಲೆಕ್ಕಾಚಾರವನ್ನು ತಾಲೂಕಿನ ಜನತೆಯ ಮುಂದೆ ಇಟ್ಟಿದ್ದಾರೆ.

ಈ ಸಂದರ್ಭದಲ್ಲಿ ಕಾಳಜಿ ಬೆಳ್ತಂಗಡಿ ಫ್ಲಂಡ್ ರಿಲೀಫ್ ಫಂಡ್ ನ ಸದಸ್ಯರಾದ ಉಜಿರೆ ಸಂದ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ,ಉಜಿರೆ ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್ , ಲ್ಯಾನ್ಸಿ ಪಿಂಟೋ, ಜಯಕರ್ ಶೆಟ್ಟಿ, ಪ್ರವೀಣ್ ಇಂದ್ರ , ಗಣೇಶ್ ಗೌಡ , ಅಬುಬಕರ್ ಉಜಿರೆ‌ ಉಪಸ್ಥಿತರಿದ್ದರು.

ಕಳೆದ ವರ್ಷದ 09-08-2019 ರಿಂದ ಇಂದಿನವರೆಗೆ ಕಾಳಜಿ ಫಂಡ್ ಗೆ ಜಮೆಯಾಗಿರುವ ಹಣದ ಮಾಹಿತಿಯನ್ನು ನೀಡಿದ್ದಾರೆ.

ಕಾಳಜಿ ಫಂಡ್ ಗೆ ದೇಣಿಗೆಯಾಗಿ ಸಂಗ್ರಹವಾದ ಹಣ 2,53,06,965.75
ಸಂಗ್ರಹವಾದ ಹಣಕ್ಕೆ ಬಡ್ಡಿ ರೂಪದಲ್ಲಿ ಜಮೆ 5,97,538.10
ಬ್ಯಾಂಕ್ ನ ಸೇವಾ ಶುಲ್ಕ ಕಡಿತವಾಗಿರುವುದು 39.00

ಬೆಳ್ತಂಗಡಿ ಕೆನರಾ ಬ್ಯಾಂಕ್ ನಲ್ಲಿ ಜಮೆಯಾಗಿರುವ ಒಟ್ಟು ಮೊತ್ತ: 2,59,04,464.85
(ಎರಡು ಕೋಟಿ, ಐವತ್ತೊಂಬತ್ತು ಲಕ್ಷದ ನಾಲ್ಕು ಸಾವಿರದ ನಾಲ್ಕು ನೂರಾ ಅರುವತ್ತ ನಾಲ್ಕು ರೂ ಮತ್ತು ಎಂಬತ್ತೈದು ಪೈಸೆ)

- Advertisement -
spot_img

Latest News

error: Content is protected !!