Thursday, June 4, 2026
Homeಪ್ರಮುಖ-ಸುದ್ದಿಅಕ್ಟೋಬರ್ ನಿಂದ ಪದವಿ ತರಗತಿ ಆರಂಭ, ಸೆಪ್ಟೆಂಬರ್ 1ರಿಂದ ಆನ್ ಲೈನ್ ತರಗತಿ ಶುರು

ಅಕ್ಟೋಬರ್ ನಿಂದ ಪದವಿ ತರಗತಿ ಆರಂಭ, ಸೆಪ್ಟೆಂಬರ್ 1ರಿಂದ ಆನ್ ಲೈನ್ ತರಗತಿ ಶುರು

- Advertisement -
- Advertisement -

ಬೆಂಗಳೂರು :  ಕೊರೊನಾ ಸೋಂಕಿನ ಆರ್ಭಟದ ನಡುವೆಯೇ ಅಕ್ಟೋಬರ್ 1 ರಿಂದ ರಾಜ್ಯದಲ್ಲಿ ಪದವಿ ಕಾಲೇಜು ಆರಂಭವಾಗಲಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. ಆದರೆ ಈ ಸಂಬಂಧ ಸರ್ಕಾರದಿಂದ ಅಧಿಕೃತ ಸುತ್ತೋಲೆ ಇನ್ನೂ ಹೊರಬಂದಿಲ್ಲ.

ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಅಕ್ಟೋಬರ್ 1 ರಿಂದ ರಾಜ್ಯದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ತರಗತಿಗಳು ಆರಂಭವಾಗಲಿದ್ದು. ಸೆಪ್ಟೆಂಬರ್ 1 ರಿಂದ ಆನ್ ಲೈನ್ ತರಗತಿ ಆರಂಭವಾಗಲಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಮಾಹಿತಿ ರವಾನಿಸಿದೆ ಎನ್ನಲಾಗಿದ್ದು, ಇನ್ನೂ, ಸರ್ಕಾರದ ಅಧಿಕೃತ ಆದೇಶ ಮಾತ್ರ ಬಾಕಿಯಿದೆ. ಆದರೆ ಸದ್ಯಕ್ಕೆ ಶಾಲೆ ಹಾಗೂ ಪಿಯುಸಿ ತರಗತಿಗಳು ತೆರೆಯುವುದಿಲ್ಲ ಎಂದು ಹೇಳಲಾಗುತ್ತಿದೆ.

ಇನ್ನೂ, ಇತ್ತೀಚೆಗಷ್ಟೇ, ಅಂತಿಮ ಸೆಮಿಸ್ಟರ್ ಹಾಗೂ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆ ನಡೆಸಬೇಕೆಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಎಲ್ಲಾ ರಾಜ್ಯಗಳಿಗೂ ನಿರ್ದೇಶನ ನೀಡಿದೆ. ಸೆಪ್ಟೆಂಬರ್ ಒಳಗಾಗಿ ಪರೀಕ್ಷೆಗಳನ್ನು ಮುಗಿಸಬೇಕೆಂದು ಸ್ಪಷ್ಟನೆ ನೀಡಿದೆ. ಹಾಗಾಗಿ ಕೇಂದ್ರ ಸರ್ಕಾರದ ಮಾರ್ಗ ಸೂಚಿಗನುಸಾರವಾಗಿ ಕಾಲೇಜು ತೆರೆಯಲು ನಿರ್ಧರಿಸಿರುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ.

- Advertisement -

Latest News

error: Content is protected !!