Friday, May 17, 2024
Homeಕರಾವಳಿಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಅಮಾನತು

ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಅಮಾನತು

spot_img
- Advertisement -
- Advertisement -

ಬೆಳ್ತಂಗಡಿ : ಕಳೆದ ಮೂರು ತಿಂಗಳ ಹಿಂದೆ ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ ಬಳಿ ಅಕ್ರಮವಾಗಿ ಮರ ಕಡಿದ ಪ್ರಕರಣ ಸಂಬಂಧ ಪ್ರಕರಣ ದಾಖಲಾಗಿ ಎರಡು ತಿಂಗಳ ಹಿಂದೆ ಅರಣ್ಯ ಇಲಾಖೆಯ ಮೂವರನ್ನು ಅಮಾನತು ಮಾಡಲಾಗಿತ್ತು. ಇದೀಗ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಅವರನ್ನು ಮೂರು ತಿಂಗಳ ಬಳಿಕ ಗುರುವಾರ ಅಮಾನತು ಆದೇಶವನ್ನು ಪಿಸಿಸಿಎಫ್ ಅವರು ಇಮೇಲ್‌ ಮೂಲಕ ಹೊರಡಿಸಿದ್ದಾರೆ.

ಅನುಮಾನಕ್ಕೆ ಕಾರಣವಾದ ಪಿಸಿಸಿಎಫ್ ನಡೆ

ಇನ್ನೂ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಗಳಾದ ತ್ಯಾಗರಾಜ್ ಅವರನ್ನು ಅಮಾನತು ಮಾಡುವ ಬಗ್ಗೆ ಕೆಲವು ದಿನದ ಹಿಂದೆಯೇ ಎಲ್ಲಾ ತಯಾರಿ ಮಾಡಿಕೊಂಡಿದ್ದ ಕೆಲವು ಹಿರಿಯ ಕಾಣದ ಅಧಿಕಾರಿಗಳು (ಪಿಸಿಸಿಎಫ್)ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾದ ಸಂಜಯ್ ಮೋಹನ್ ಮೂಲಕ ಒತ್ತಡ ಹೇರಿ ಗುರುವಾರ ಇಮೇಲ್ ಮಾಡುವ ಆದೇಶ ಹೊರಡಿಸಿದ್ದಾರೆ. ಆದ್ರೆ ಆದೇಶ ಪತ್ರ ಇನ್ನೂ ತ್ಯಾಗರಾಜ್ ಅವರ ಕೈ ಸೇರಿಲ್ಲ.

ಪಿಸಿಸಿಎಫ್ ಸಂಜಯ್ ಮೋಹನ್ ಅವರು ಅಮಾನತು ಆದೇಶ ಮಾಡಿದ ಬಳಿಕ ರಜೆ ಮೇಲೆ ಹೋಗಿದ್ದಾರೆ ಇವರು ಇದೆ ತಿಂಗಳು ನಿವೃತ್ತಿ ಕೂಡ ಅಗಲಿದ್ದಾರೆ.

ಪ್ರಕರಣ ನಡೆದ ಬಗ್ಗೆ ತನಿಖೆ ಮಾಡಿ ಮೂವರು ಅರಣ್ಯ ಅಧಿಕಾರಿಗಳನ್ನು ಅದೇ ಸಮಯದಲ್ಲಿ ಅಮಾನತು ಮಾಡಿದ್ದಾರೆ ಇದೀಗ ತಡವಾಗಿ ಬೆಳ್ತಂಗಡಿ ಅರಣ್ಯಾಧಿಕಾರಿ ತ್ಯಾಗರಾಜ್ ಅವರನ್ನು ಅಮಾನತು ಮಾಡಿರುವ ಬಗ್ಗೆ ಅನುಮಾನ ಮೂಡಿದೆ ಅದಲ್ಲದೆ ಅಮಾನತು ಪತ್ರ ಬೆಂಗಳೂರಲ್ಲಿ ಟೈಪ್ ಮಾಡಿದ ಕೂಡಲೇ ಕೆಲವು ಪ್ರತಿಕಾ ಮಾಧ್ಯಮದ ಮುಖಸ್ಥರಿಗೆ ಕರೆ ಮಾಡಿ ವಿಷಯ ತಿಳಿಸಲಾಗಿತ್ತು.

ಬೆಳ್ತಂಗಡಿ ಅರಣ್ಯಾಧಿಕಾರಿ ತ್ಯಾಗರಾಜ್ ಅವರು ನಿಷ್ಠಾವಂತ ಅಧಿಕಾರಿಯಾಗಿದ್ದು ಕಲ್ಮಂಜ ಅಕ್ರಮ ಮರ ಕಡಿದ ಪ್ರಕರಣದಲ್ಲಿ ಯಾವುದೇ ರೀತಿಯ ತಪ್ಪು ಅಗಿಲ್ಲ ಆದ್ರೆ ಮಂಗಳೂರಿನ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಜೊತೆ ಹಿಂದಿನಿಂದಲೇ ವೈಮಸ್ಸು ಇದ್ದು ಅವರೇ ತ್ಯಾಗರಾಜ್ ಅವರನ್ನು ಅಮಾನತು ಮಾಡಲು ವರ್ಗಾವಣೆ ಅಗಿ ವಾಪಸ್ ಬಂದವರೊಂದಿಗೆ ಸೇರಿಕೊಂಡು ಅವರನ್ನೇ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಯಾಗಿ ಮಾಡಲು ಮಾಡಿದ ನಾಟಕ ಎಂಬುವುದು ಅರಣ್ಯ ಇಲಾಖೆಯ ಕೆಲವರಿಂದ ಬಂದ ಮಾಹಿತಿ.

- Advertisement -
spot_img

Latest News

error: Content is protected !!