Sunday, June 7, 2026
Homeಕರಾವಳಿಬೆಳ್ತಂಗಡಿ: ಮುಂಡಾಜೆ ಸೀಟ್ ರಕ್ಷಿತಾರಣ್ಯದಲ್ಲಿ ಆರು ಮಂಗಗಳ ಮೃತದೇಹ ಪತ್ತೆ

ಬೆಳ್ತಂಗಡಿ: ಮುಂಡಾಜೆ ಸೀಟ್ ರಕ್ಷಿತಾರಣ್ಯದಲ್ಲಿ ಆರು ಮಂಗಗಳ ಮೃತದೇಹ ಪತ್ತೆ

- Advertisement -
- Advertisement -

ಬೆಳ್ತಂಗಡಿ: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ -73 ರ ಮುಂಡಾಜೆ ಗ್ರಾಮದ ಕಾಯರ್ತೊಡಿ ರಸ್ತೆಯ ಸೀಟ್ ಸಮೀಪದ ಅರಣ್ಯ ಇಲಾಖೆಗೆ ಸೇರಿದ ರಕ್ಷಿತಾರಣ್ಯ ಪ್ರದೇಶದಲ್ಲಿ ಇಂದು ಬೆಳಿಗ್ಗೆ 6 ಮಂಗಗಳ ಮೃತಗಳು ಪತ್ತೆಯಾಗಿದೆ.

ಮಂಗಗಳ ಮೃತದೇಹಗಳನ್ನು ಸ್ಥಳೀಯರು ಮೊದಲು ಕಂಡಿದ್ದು, ತಕ್ಷಣ ಅರಣ್ಯ ಇಲಾಖೆ ಮತ್ತು ಆರೋಗ್ಯ ಇಲಾಖೆಗೆ ತಿಳಿಸಿದ್ದಾರೆ. ಮುಂಡಾಜೆ ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಡಾ.ಕಾವ್ಯ, ಬೆಳ್ತಂಗಡಿ ಸಿನಿಯರ್ ಆರೋಗ್ಯ ನಿರೀಕ್ಷಕ ಸೋಮನಾಥ್ ಸ್ಥಳಕ್ಕೆ ಬಂದು ಮಂಗಗಳನ್ನು ಪರಿಶೀಲನೆ ಮಾಡಿದ್ದು ಸ್ಥಳೀಯ ನಿವಾಸಿಗಳ ತೋಟದಲ್ಲಿ ಇದ್ದ ವಿಷ ಪದಾರ್ಥವನ್ನು ಮಂಗಗಳು ತಿಂದು ಮೃತಪಟ್ಟಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಆರು ಮಂಗಗಳನ್ನು ಅದೇ ಸ್ಥಳದಲ್ಲಿ ಬೆಂಕಿ ಹಾಕಿ ಸುಡಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಈ ವೇಳೆ ಅರಣ್ಯ ಇಲಾಖೆ ಮುಂಡಾಜೆಯ ಅರಣ್ಯ ರಕ್ಷಕ ಶರತ್ ಶೆಟ್ಟಿ ,ಮುಂಡಾಜೆ ಗ್ರಾಮ ಪಂಚಾಯತ್ ಅಧಿಕಾರಿಗಳು ಇದ್ದರು.

- Advertisement -

Latest News

error: Content is protected !!