Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಚೆಕ್ ಅಮಾನ್ಯ ಪ್ರಕರಣ ನ್ಯಾಯಾಲಯದಲ್ಲಿ ಖುಲಾಸೆ

ಬೆಳ್ತಂಗಡಿ : ಚೆಕ್ ಅಮಾನ್ಯ ಪ್ರಕರಣ ನ್ಯಾಯಾಲಯದಲ್ಲಿ ಖುಲಾಸೆ

- Advertisement -
- Advertisement -

ಬೆಳ್ತಂಗಡಿ : ವ್ಯವಹಾರ ಸಂಬಂಧ ಎಂಬುವುದಾಗಿ 9 ಲಕ್ಷ ರೂಪಾಯಿ ಹಣ ಪಡೆದು ಅದಕ್ಕೆ ಚೆಕ್ ನೀಡಿ ವಾಪಸ್ ನೀಡದ ಕಾರಣ ಬೆಳ್ತಂಗಡಿ ತಾಲೂಕಿನ ಕಾಣಿಯೂರು ಗ್ರಾಮದ ನಿವಾಸಿ ಚಂದ್ರಶೇಖರ್ ಎಮ್ ಎಂಬವರು ಬೆಳ್ತಂಗಡಿ ಸಿ.ಜೆ(ಹಿ.ವಿ) ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ 11-12-2023 ರಂದು ಆರೋಪಿ ಬೆಳ್ತಂಗಡಿ ತಾಲೂಕಿನ ಓಡಿನ್ನಾಳ ಗ್ರಾಮದ ರೇಷ್ಮೆ ರೋಡ್ ನಿವಾಸಿ ಸಂತೋಷ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಈ ಬಗ್ಗೆ ಬೆಳ್ತಂಗಡಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ವಾದ-ಪ್ರತಿವಾದದ ಬಳಿಕ ಆರೋಪಿ ಬೆಳ್ತಂಗಡಿ ತಾಲೂಕಿನ ರೇಷ್ಮೆ ರೋಡ್ ನಿವಾಸಿ ಸಂತೋಷ್ ಎಂಬವರನ್ನು ಪ್ರಕರಣದಲ್ಲಿ ದೋಷಮುಕ್ತಗೊಳಿಸಿ ಜ.3 ರಂದು ತೀರ್ಪು ನೀಡಲಾಗಿದೆ. ಆರೋಪಿ ಪರ ವಕೀಲರಾದ ಶ್ರೀಮತಿ ಉಷಾ.ಎನ್.ಜಿ ಮತ್ತು ಶ್ರೀ ವೈ.ರಾಧಾಕೃಷ್ಣ ಇವರು ವಾದ ಮಂಡಿಸಿದ್ದರು.

- Advertisement -

Latest News

error: Content is protected !!