ಬೆಳ್ತಂಗಡಿ: ಬಾಲಕ ಸುಮಂತ್ ನಿಗೂಢ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟತೆ ಶಾಸಕ ಹರೀಶ್ ಪೂಂಜ ವಿಧಾನಸಭೆಯಲ್ಲಿ ಪ್ರಶ್ನೆ ಕೇಳಿದ್ದು, ಗೃಹ ಸಚಿವ ಪರಮೇಶ್ವರ ತನಿಖೆಯ ಪ್ರಗತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಶಾಸಕ ಹರೀಶ್ ಪೂಂಜ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್ 15 ವರ್ಷದ ಬಾಲಕ ಸುಮಂತ್ ನಾಪತ್ತೆ ಬಗ್ಗೆ ಮನೆಯವರು ದೂರು ನೀಡಿದ್ದರು, ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಬಾಲಕನ ಹುಡುಕಾಟ ನಡೆಸಿದ್ದಾರೆ. ಆದರೆ ಅಷ್ಟರಲ್ಲಿ ಬಾಲಕನ ಮೃತದೇಹ ಅಲ್ಲೆ ಮನೆಯ ಹತ್ತಿರದ ಕೆರೆಯಲ್ಲಿ ಪತ್ತೆಯಾಗಿತ್ತು. ಈ ಕುರಿತಂತೆ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆಗಾಗಿಗ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದರು. ಸದ್ಯದಲ್ಲೆ ಬಾಲಕನ ಸಾವಿನ ಕುರಿತಂತೆ ಸತ್ಯ ಹೊರಗಡೆ ಬರುತ್ತೆ ಇದೇನಾದರೂ ಒಂದು ವೇಳೆ ಕೊಲೆ ಆಗಿದ್ರೆ ಕೊಲೆ ಮಾಡಿದವರನ್ನು ಹಿಡಿಯುವ ಕೆಲಸವನ್ನ ಮಾಡ್ತೇವೆ ಎಂದಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ನಾನು ಪೊಲೀಸ್ ಇಲಾಖೆಯವರಿಗೆ ಸೂಚನೆಯನ್ನು ಕೊಡುತ್ತೇನೆ ಆದಷ್ಟು ಶೀಘ್ರವಾಗಿ ಪತ್ತೆ ಹಚ್ಚಬೇಕು ಅಂತ ಹೇಳಿ ನಾನು ಸೂಚನೆಯನ್ನು ಕೊಟ್ಟು ಕ್ರಮ ತಗೊಳ್ತೀನಿ ಎಂದಿದ್ದಾರೆ.


