Wednesday, June 24, 2026
Homeಕರಾವಳಿಮಂಗಳೂರುಕಡಬ: ಪೋಲೆಂಡ್ ನಲ್ಲಿ ಉದ್ಯೋಗ ವೀಸಾ ಕೊಡಿಸೋದಾಗಿ ಹೇಳಿ ವ್ಯಕ್ತಿಯೊಬ್ಬರಿಗೆ ನಾಲ್ಕೂವರೆ ಲಕ್ಷ ರೂಪಾಯಿ ವಂಚಿಸಿದ...

ಕಡಬ: ಪೋಲೆಂಡ್ ನಲ್ಲಿ ಉದ್ಯೋಗ ವೀಸಾ ಕೊಡಿಸೋದಾಗಿ ಹೇಳಿ ವ್ಯಕ್ತಿಯೊಬ್ಬರಿಗೆ ನಾಲ್ಕೂವರೆ ಲಕ್ಷ ರೂಪಾಯಿ ವಂಚಿಸಿದ ದಂಪತಿ

- Advertisement -
- Advertisement -

ಕಡಬ: ಪೋಲೆಂಡ್ ನಲ್ಲಿ ಉದ್ಯೋಗ ವೀಸಾ ಕೊಡಿಸೋದಾಗಿ ಹೇಳಿ ವ್ಯಕ್ತಿಯೊಬ್ಬರಿಗೆ ದಂಪತಿ ನಾಲ್ಕೂವರೆ ಲಕ್ಷ ರೂಪಾಯಿ ವಂಚಿಸಿದ ಘಟನೆ ಕಡಬದಲ್ಲಿ ನಡೆದಿದೆ.

ಕಡಬದ ನಿವಾಸಿ ಮನೋಜ್ ವಿದೇಶದಲ್ಲಿ ಉದ್ಯೋಗಕ್ಕಾಗಿ ಹುಡುಕಾಟದಲ್ಲಿದ್ದರು. ಜನವರಿ 2023ರ ವೇಳೆ ಪೋಲೆಂಡ್ ದೇಶದಲ್ಲಿ ಕೆಲಸದ ಇದೆ ಎಂದು ಹೇಳಿ ಬೆಳ್ತಂಗಡಿ ತಾಲೂಕು ರೇಖ್ಯಾ ಗ್ರಾಮದ ಇಂಜಿರ ನಿವಾಸಿಗಳಾದ ಪರಂಬಿಲ್ ಜೋಸೆಫ್ ಮನೋಜ್ ಹಾಗೂ ಅವರ ಪತ್ನಿ ಸ್ಮಿತಾ ಮನೋಜ್ ಎಂಬವರ ಪರಿಚಯವಾಗಿದೆ. ಈ ವೇಳೆ ಆರೋಪಿಗಳು ಪೊಲೆಂಡ್ ದೇಶದಲ್ಲಿ ಉತ್ತಮ ಸಂಪರ್ಕ ಇದ್ದು, ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ವೀಸಾಗೆ ಸುಮಾರು 5 ಲಕ್ಷ ಹಣ ಖರ್ಚಾಗುತ್ತದೆ ಎಂದು ತಿಳಿಸಿದ್ದಾರೆ.

ಆರೋಪಿಗಳ ಮಾತನ್ನು ನಂಬಿಗ ಮನೋಜ್ ಹಂತ ಹಂತವಾಗಿ ಆರೋಪಿಗಳ ಬ್ಯಾಂಕ್ ಖಾತೆಗೆ 3.50 ಲಕ್ಷ ಹಣವನ್ನು ಹಾಕಿದ್ದು, ಅಲ್ಲದೆ ಸ್ಮಿತಾ ಮನೋಜ್ 1 ಲಕ್ಷ ಹಣವನ್ನು ನಗದಾಗಿ ಸ್ವೀಕರಿಸಿದ್ದರು.
ಈ ನಡುವೆ 09-01-2024 ರಂದು ಮನೋಜ್ ವೀಸಾ ಸಂದರ್ಶನಕ್ಕೆ ಮುಂಬೈಗೆ ತೆರಳಿದಾಗ, ತಮ್ಮ ವೀಸಾಕ್ಕೆ ಯಾವುದೇ ಅರ್ಜಿಯೇ ಸಲ್ಲಿಸಿಲ್ಲ ಎಂಬ ಸತ್ಯ ಬಹಿರಂಗವಾಗಿದೆ. ನಂತರ ಆರೋಪಿತರನ್ನು ಸಂಪರ್ಕಿಸಿದಾಗ, ಅವರು ಗೊಂದಲದ ಉತ್ತರ ನೀಡಿ, ಹಣವನ್ನು 2025ರ ಡಿಸೆಂಬರ್ ಕೊನೆಯ ವಾರದಲ್ಲಿ ವಾಪಸು ಕೊಡುತ್ತೇವೆ ಎಂದು ಕಾಲಹರಣ ಮಾಡಿದ್ದಾರೆ. ಆದರೆ, ನಿಗದಿತ ಅವಧಿಯಲ್ಲೂ ಹಣ ವಾಪಸು ನೀಡಿಲ್ಲ.


2026ರ ಜನವರಿ ಎರಡನೇ ವಾರದಲ್ಲಿ ಮತ್ತೆ ಸಂಪರ್ಕಿಸಲು ಯತ್ನಿಸಿದಾಗ, ಪರಂಬಲ್ ಜೋಸೆಫ್ ಮನೋಜ್ ಸಂಪರ್ಕಕ್ಕೆ ಸಿಗದೇ ಇದ್ದು, ಸ್ಮಿತಾ ಮನೋಜ್ ಹಣ ನೀಡುವುದನ್ನು ನಿರಾಕರಿಸಿ, “ಹಣ ಕೇಳಿದರೆ ಮಾನಹಾನಿ ಮೊಕದ್ದಮೆ ದಾಖಲಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದಾರೆ. ಇದೀಗ ಮನೋಜ್ ವಿದೇಶದಲ್ಲಿ ಉದ್ಯೋಗ ಕಲ್ಪಿಸುವುದಾಗಿ ಹಣ ಪಡೆದ ವಂಚನೆ ಮಾಡಿದ ಆರೋಪಿಗಳ ವಿರುದ್ದ ಕ್ರಮಕ್ಕೆ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -

Latest News

error: Content is protected !!