Tuesday, May 14, 2024
Homeಕರಾವಳಿಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ದೂರವಾಣಿಗೆ ಅನಾರೋಗ್ಯ: ಅವ್ಯವಸ್ಥೆಯ ತಾಣವಾಗಿರುವ ತಾಲೂಕು ಆಸ್ಪತ್ರೆ

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ದೂರವಾಣಿಗೆ ಅನಾರೋಗ್ಯ: ಅವ್ಯವಸ್ಥೆಯ ತಾಣವಾಗಿರುವ ತಾಲೂಕು ಆಸ್ಪತ್ರೆ

spot_img
- Advertisement -
- Advertisement -

ಬೆಳ್ತಂಗಡಿ: ಪ್ರತಿ ಬಾರಿ ಕೂಡ ಒಂದಲ್ಲ ಒಂದು ಪ್ರಕರಣದಲ್ಲಿ ಸುದ್ದಿಯಾಗುತ್ತಿರುವ ಬೆಳ್ತಂಗಡಿ ತಾಲೂಕು ಆರೋಗ್ಯ ಕೇಂದ್ರದಲ್ಲಿ ಮತ್ತೊಂದು ಅನಾರೋಗ್ಯ ಕಾಡಿದೆ. ಇದು ಎರಡು ಕಡೆ ಸಾರ್ವಜನಿಕ ಸೇವೆಯಲ್ಲಿರುವ ದೂರವಾಣಿಯ ಅನಾರೋಗ್ಯದ ಸ್ಟೋರಿ.

ಬೆಳ್ತಂಗಡಿ ತಾಲೂಕು ಆರೋಗ್ಯ ಕೇಂದ್ರದಲ್ಲಿ ಒಂದಲ್ಲ ಒಂದು ಪ್ರಕರಣ ಬೆಳಕಿಗೆ ಬರುತ್ತಿದೆ. ಆದ್ರೆ ಇಲ್ಲಿನ ಸಮಸ್ಯೆಗಳನ್ನು ಅಧಿಕಾರಿಗಳು ಬಗೆಹರಿಸುವ ಯಾವ ಲಕ್ಷಣಗಳು ಇಲ್ಲಿಯವರೆಗೆ ಕಂಡುಬಂದಿಲ್ಲ. ಅಕ್ಟೋಬರ್ 29 ರಂದು ಮಧ್ಯಾಹ್ನ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಾಂ ಕೂಡ ಸರಕಾರಿ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಸಮಸ್ಯೆ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ದಿಢೀರ್‌ ಭೇಟಿ ನೀಡಿ ಇಲ್ಲಿನ ಅವ್ಯವಸ್ಥೆ ಕಂಡು ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡು ಸಮಸ್ಯೆ ಸರಿಪಡಿಸಲು ಸೂಚನೆ ನೀಡಿದ್ದರು. ಈಗ ಮತ್ತೊಂದು ಸಮಸ್ಯೆ ಬೆಳಕಿಗೆ ಬಂದಿದೆ.

ಸರಕಾರಿ ಆಸ್ಪತ್ರೆಯ ಸಮಸ್ಯೆ ಬಗ್ಗೆ ಲೋಕಾಯುಕ್ತ ದಾಳಿ, ಎಸಿಬಿ ದಾಳಿ , ಶಾಸಕರ ಭೇಟಿ, ತಹಶೀಲ್ದಾರ್ ಭೇಟಿ ಸೇರಿದಂತೆ ಹಲವು ವರ್ಷಗಳಿಂದ ನಡೆಯುತ್ತಾ ಬಂದ್ರು ಇಲ್ಲಿಯವರು ಮಾತ್ರ ಇನ್ನೂ ಎಚ್ಚೆತ್ತುಕೊಳ್ಳದೆ ನಿದ್ರೆಯಲ್ಲಿ ಇದ್ದಾರೆ‌. ಲೋಕಾಯುಕ್ತ ನ್ಯಾಯಮೂರ್ತಿ ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ದಾಳಿ ಮಾಡಿ ಇಲ್ಲಿಯವರಿಗೆ ಎಚ್ಚರಿಕೆ ಮಾತ್ರ ಕೊಟ್ಟಿದ್ದಾರೆ. ಆದ್ರೆ ಕ್ರಮ ಮಾತ್ರ ಇಲ್ಲಿಯವರೆಗೆ ಆಗಿಲ್ಲ. ಇದರಿಂದ ಇವರಿಗೆ ಕ್ಯಾರೆ ಇಲ್ಲದಂತಾಗಿದೆ. ಈಗ ಮತ್ತೊಂದು ದೂರವಾಣಿ ಅನಾರೋಗ್ಯ ಪ್ರಕರಣ ಬೆಳಕಿಗೆ ಬಂದಿದೆ.

ಸರಕಾರಿ ಆಸ್ಪತ್ರೆಯಲ್ಲಿ ಎರಡು ಕಡೆ ಸಾರ್ವಜನಿಕ ಸೇವೆಗಾಗಿ ಬಿಎಸ್ಎನ್ಎಲ್ ಲ್ಯಾಂಡ್ ಲೈನ್ ದೂರವಾಣಿ ಇದೆ. ಆದ್ರೆ ಇದಕ್ಕೆ ಅನಾರೋಗ್ಯ ಶುರುವಾಗಿ ಕಳೆದು ಆರು ತಿಂಗಳು ಆಗಿದ್ದರೂ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮಾತ್ರ ಇನ್ನೂ ನಿದ್ದೆಯ ಮಂಪರಿನಲ್ಲಿದ್ದಾರೆ. ತುರ್ತು ಚಿಕಿತ್ಸಾ ವಿಭಾಗದ 08256 232116 ಮತ್ತು ಹೊರರೋಗಿ ವಿಭಾಗದ 08256 233116 ನಂಬರಿನ ಈ ಎರಡು ಲ್ಯಾಂಡ್ ಲೈನ್ ದೂರವಾಣಿ ಇದೆ. ಆದ್ರೆ ಎರಡು ಫೋನ್ ಗಳ ಸಂಪರ್ಕ ಸಂಪೂರ್ಣ ಕಡಿದು ಹೋಗಿದೆ. ರೋಗಿಗಳು ಸ್ಕ್ಯಾನಿಂಗ್ ಬಗ್ಗೆ ಮಾಹಿತಿ ತಿಳಿಯಲು , ಅಂಗವಿಕಲರ ಗುರುತು ಚೀಟಿ ಮಾಹಿತಿ ಪಡೆಯುವ ಮುಂತಾದವುಗಳ ಮಾಹಿತಿ ತಿಳಿಯಲು ಕರೆ ಮಾಡಿದ್ರೆ ಯಾವುದೇ ಸಂಪರ್ಕಕ್ಕೆ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಆದ್ರೆ ಇದರ ಬಗ್ಗೆ ರೋಗಿಗಳು ದೂರು ನೀಡಿದ್ರೂ ಆಸ್ಪತ್ರೆಯ ವೈದ್ಯಾಧಿಕಾರಿ ಚಂದ್ರಕಾಂತ್ ಮಾತ್ರ ಸರಿಪಡಿಸಿ ರೋಗಿಗಳಿಗೆ ಅನುಕೂಲ ಮಾಡುವ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯ ವಹಿಸುವ ಮುಖ್ಯಸ್ಥರ ಹಾಗೂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿ ಸಾರ್ವಜನಿಕರ ಆಗ್ರಹವಾಗಿದೆ.

- Advertisement -
spot_img

Latest News

error: Content is protected !!