Thursday, June 4, 2026
Homeತಾಜಾ ಸುದ್ದಿಸುಳ್ಯ: ಹೃದಯಾಘಾತದಿಂದ ಮೃತಪಟ್ಟ ಎರಡನೇ ತರಗತಿ ವಿದ್ಯಾರ್ಥಿ

ಸುಳ್ಯ: ಹೃದಯಾಘಾತದಿಂದ ಮೃತಪಟ್ಟ ಎರಡನೇ ತರಗತಿ ವಿದ್ಯಾರ್ಥಿ

- Advertisement -
- Advertisement -

ಸುಳ್ಯ: ಹೃದಯಾಘಾತದಿಂದ ಎರಡನೇ ತರಗತಿ ವಿದ್ಯಾರ್ಥಿ ಮೃತಪಟ್ಟ ಘಟನೆ ಅಮರಮುಡ್ನೂರು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಕುಕ್ಕುಜಡ್ಕ ಸ.ಹಿ.ಪ್ರಾ. ಶಾಲೆಯಲ್ಲಿ 2 ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಕುಂಟಿಕಾನದ ಮೋಕ್ಷಿತ್ ಕೆ.ಸಿ. ಹೃದಯಾಘಾತದಿಂದ ಮೃತಪಟ್ಟ ಬಾಲಕ.

ನ.1 ರಂದು ಕನ್ನಡ ರಾಜ್ಯೋತ್ಸವದ ದಿನದಂದು ಬಾಲಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನು. ಆದ್ರೆ ಆತನಿಗೆ ಜ್ವರ ಇದ್ದ ಕಾರಣ ಶಿಕ್ಷಕರು ಪೋಷಕರಿಗೆ ಬರುವಂತೆ ತಿಳಿಸಿದ್ದಾರೆ. ಬಾಲಕನ ತಂದೆ ಶಾಲೆಗೆ ಬರ್ತಿದ್ದಂತೆ ಬಾಲಕ ಕುಸಿದು ಬಿದ್ದಿದ್ದಾನೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತಾದ್ರೂ ವೈದ್ಯರು ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿಸಿದ್ರು.

- Advertisement -

Latest News

error: Content is protected !!