ಬಳ್ಳಾರಿ : ನಿಜಾಮುದ್ದೀನ್ ಮರ್ಕಜ್‌ನ ತೆರಳಿದ್ದವರಿಗೆ ಇಂದು ಸಂಜೆ 6 ಗಂಟೆ ಡೆಡ್‌ಲೈನ್ ನೀಡಲಾಗಿದ್ದು, ಜಿಲ್ಲಾ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಬೇಕು ಅಂತ ಜಿಲ್ಲಾಧಿಕಾರಿ ನಕುಲ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು ಕರೋನಾ ವೈರಸ್ ಅನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಜಿಲ್ಲಾಡಳಿತ ಎಲ್ಲಾ ರೀತಿಯಲ್ಲಿ ಸಿದ್ದವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕೂಡ ಸಹಕರ ಮಾಡಬೇಕು, ಈ ನಡುವೆ ನಿಜಾಮುದ್ದೀನ್ ಮರ್ಕಜ್‌ಗೆ ಭೇಟಿ ನೀಡಿದವರು 08392-1077,08392-277100,8277888866 ಕರೆ ಮಾಡಿ ಮಾಹಿತಿ ನೀಡಬೇಕು ಇಲ್ಲವಾದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಅಂತ ತಿಳಿಸಿದ್ದಾರೆ.
ಇತ್ತೀಚೆಗೆ ನವದೆಹಲಿಯ ನಿಜಾಮುದ್ದೀನ್ ಮರ್ಕಜ್‌ನಲ್ಲಿ ನಡೆದ ಧಾರ್ಮಿಕ ಸಭೆಗೆ ಹಾಜರಾಗಿದ್ದವರಲ್ಲಿ ಕೋರಾನ ಸೊಂಕು ಹೆಚ್ಚಾಗಿ ಹರಡಿರುವುದು ಕಂಡು ಬರುತ್ತಿರುವುದರಿಂದ ದೇಶದ ಎಲ್ಲಾ ಊರುಗಳಲ್ಲಿ ನಿಜಾಮುದ್ದೀನ್ ಮರ್ಕಜ್‌ನಲ್ಲಿ ನಡೆದ ಧಾರ್ಮಿಕ ಸಭೆಗೆ ಹಾಜರಾಗಿದ್ದವರ ಹುಡುಕಾಟ ಶುರುವಾಗಿದ್ದು ಕೆಲವು ಮಂದಿ ತಲೆ ಮರೆಸಿಕೊಂಡಿದ್ದಾರೆ ಎನ್ನುವ ಆರೋಪ ಕೂಡ ಕೇಳಿ ಬರುತ್ತಿದ್ದು, ಆಯಾ ಜಿಲ್ಲಾಡಳಿತಗಳು ಕೂಡ ನಿಜಾಮುದ್ದೀನ್ ಮರ್ಕಜ್‌ನಲ್ಲಿ ನಡೆದ ಧಾರ್ಮಿಕ ಸಭೆಗೆ ಹಾಜರಾಗಿದ್ದವರನ್ನು ಹುಡುಕಿ ಕ್ವಾರಂಟೈನ್‌ಗೆ ಒಳಪಡಿಸುತ್ತಿದೆ.
ನಿಜಾಮುದ್ದೀನ್ ಮರ್ಕಜ್‌ಗೆ ತೆರಳಿದ್ದವರಿಗೆ ಇಂದು ಸಂಜೆ 6 ಗಂಟೆ ಡೆಡ್‌ಲೈನ್
- Advertisement -
- Advertisement -
- Advertisement -