Friday, June 5, 2026
Homeಕರಾವಳಿಬೆಳ್ಳಾರೆಯಲ್ಲಿ ಎಸ್.ಡಿ.ಪಿ.ಐ 11 ನೇ ವರ್ಷದ ಸ್ಥಾಪಕ ದಿನಾಚರಣೆ

ಬೆಳ್ಳಾರೆಯಲ್ಲಿ ಎಸ್.ಡಿ.ಪಿ.ಐ 11 ನೇ ವರ್ಷದ ಸ್ಥಾಪಕ ದಿನಾಚರಣೆ

- Advertisement -
- Advertisement -

ಬೆಳ್ಳಾರೆ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ 11ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಬೆಳ್ಳಾರೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಎಸ್.ಡಿ.ಪಿ.ಐ ಬೆಳ್ಳಾರೆ ವಲಯ ಅಧ್ಯಕ್ಷ ಆಶಿರ್ ಎ.ಬಿ. ಧ್ವಜಾರೋಹಣ ನೆರವೇರಿಸಿದರು.

ನಂತರ ಇತ್ತೀಚೆಗೆ ಭಾರತದ ಗಡಿಯಲ್ಲಿ ನಡೆಸಿದ ಚೀನಾದ ಕಿರಾತಕ ಘಟನೆಯನ್ನು ಖಂಡಿಸಿ ಹುತಾತ್ಮರಾದ ನಮ್ಮ ದೇಶದ ವೀರ ಯೋಧರಿಗೆ ಸಂತಾಪ ಸೂಚಿಸಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ನಾಯಕ ಜನಾಬ್ ಶಾಫಿ ಬೆಳ್ಳಾರೆ ಸಂಸ್ಥಾಪನಾ ದಿನದ ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಸುಳ್ಯ ವಿಧಾನಸಭಾ ಸಮಿತಿಯ ಸದಸ್ಯರುಗಳಾದ ಮಮ್ಮಾಲಿ ಹಾಜಿ, ಬಿ.ಎ.ಬಶೀರ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಮುಸ್ತಫಾ ಪೈಚಾರ್, ಬೆಳ್ಳಾರೆ ವಲಯ ಅಧ್ಯಕ್ಷ ಶಹೀದ್. ಎಂ, ಕಾರ್ಯದರ್ಶಿ ಜಾಬಿರ್, ಪಾಲ್ತಾಡ್ ಏರಿಯಾ ಅಧ್ಯಕ್ಷ ಬಶೀರ್ ಕೆ , ವಲಯ ಸಮಿತಿ ಸದಸ್ಯರುಗಳಾದ ಯು.ಎಚ್.ಝೈನುದ್ದೀನ್, ಅಬ್ದುಲ್ ರಹಿಮಾನ್ ತಂಬಿನಮಕ್ಕಿ, ಹಸೈನಾರ್ ಹಾಜಿ ಸಿ.ಎಂ, ಹಾಗೂ ವಲಯ ಸಮಿತಿ ಸದಸ್ಯರುಗಳು ಪಕ್ಷದ ಕಾರ್ಯಕರ್ತರು ಹಿತೈಷಿಗಳು ಉಪಸ್ಥಿತರಿದ್ದರು.

- Advertisement -

Latest News

error: Content is protected !!