Saturday, June 27, 2026
Homeಕರಾವಳಿಸುಳ್ಯದ ಅರಂತೋಡು ಬಳಿ ಉರುಳಿದ ಬಿಯರ್ ತುಂಬಿದ್ದ ಲಾರಿ: ಬಾಟಲಿಗಾಗಿ ಮುಗಿಬಿದ್ದ ಮದ್ಯಪ್ರಿಯರು

ಸುಳ್ಯದ ಅರಂತೋಡು ಬಳಿ ಉರುಳಿದ ಬಿಯರ್ ತುಂಬಿದ್ದ ಲಾರಿ: ಬಾಟಲಿಗಾಗಿ ಮುಗಿಬಿದ್ದ ಮದ್ಯಪ್ರಿಯರು

- Advertisement -
- Advertisement -

ಸುಳ್ಯ: ಬಿಯರ್ ತುಂಬಿದ ಲಾರಿಯೊಂದು ಸುಳ್ಯದ ಅರಂತೋಡು ಸಮೀಪ ಕೊಡಂಕೇರಿ ಎಂಬಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿತ್ತು. ಬಿಯರ್ ಲಾರಿ ಪಲ್ಟಿಯಾದ ಮಾಹಿತಿ ಸಿಗುತ್ತಿದ್ದಂತೆ ಬಿಯರ್ ಪ್ರಿಯರು ಹಲವು ಬಾಟಲ್ ಗಳನ್ನು ಎಗರಿಸಿದ್ದಾರೆ.

ಶನಿವಾರ ತಡರಾತ್ರಿ ಸುಮಾರು 1 ಗಂಟೆಗೆ ಈ ಘಟನೆ ನಡೆದಿದ್ದು, ಮೈಸೂರಿನಿಂದ ಮಂಗಳೂರಿಗೆ ಬಿಯರ್ ಸಾಗಿಸುತ್ತಿದ್ದ ಲಾರಿ ಇದಾಗಿತ್ತು. ಸುಳ್ಯ ತಾಲೂಕಿನ ಅರಂತೋಡು ಸಮೀಪ ಕೊಡಂಕೇರಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ.

ಡಿಕ್ಕಿ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಲಾರಿ ಚಾಲಕ ಹಾಗೂ ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ. ಅಪಘಾತಕ್ಕೀಡಾದ ಲಾರಿಯಲ್ಲಿ ಸುಮಾರು ರೂ. 45 ಲಕ್ಷ ಮೌಲ್ಯದ ಬಿಯರ್ ಇತ್ತೆಂದು ಹೇಳಲಾಗುತ್ತಿದೆ. ಬಿಯರ್ ಲಾರಿ ಮಗುಚಿ ಬಿದ್ದಿರುವುದು ಸಾಮಾಜಿಕ ಜಾಲತಾಣಗಳ ಮೂಲಕ ಗೊತ್ತಾಗುತ್ತಿದ್ದಂತೆ ಕೆಲವು ಬಿಯರ್ ಪ್ರಿಯರು ಸ್ಥಳಕ್ಕಾಗಮಿಸಿ ಬಾಟಲ್​ಗಳನ್ನು​ ಎತ್ತಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!