Wednesday, June 3, 2026
Homeಕರಾವಳಿಕಾರ್ಕಳದ ಹೆಬ್ರಿಯಲ್ಲಿ ಕರಡಿ ದಾಳಿ: ಕೂಲಿ ಕಾರ್ಮಿಕನಿಗೆ ಮಾರಣಾಂತಿಕ ಗಾಯ

ಕಾರ್ಕಳದ ಹೆಬ್ರಿಯಲ್ಲಿ ಕರಡಿ ದಾಳಿ: ಕೂಲಿ ಕಾರ್ಮಿಕನಿಗೆ ಮಾರಣಾಂತಿಕ ಗಾಯ

- Advertisement -
- Advertisement -

ಕಾರ್ಕಳ: ಕರಡಿಯೊಂದು ದಾಳಿ ನಡೆಸಿದ ಪರಿಣಾಮ ಕೂಲಿ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾರ್ಕಳದ ಹೆಬ್ರಿ ಕಬ್ಬಿನಾಲೆಯಲ್ಲಿ ನಡೆದಿದೆ.

ರಾಮಕೃಷ್ಣ ಗೌಡ ಕರಡಿ ದಾಳಿಗೆ ಒಳಗಾದ ವ್ಯಕ್ತಿ. ಕಬ್ಬಿನಾಲೆ ಪರಿಸರದಲ್ಲಿ ಇತ್ತೀಚೆಗೆ ಕರಡಿ ಹಾವಳಿ ಹೆಚ್ಚಾಗಿದೆ. ಕೂಲಿ ಕಾರ್ಮಿಕರಾಗಿರುವ ರಾಮಕೃಷ್ಣ ಅವರ ಮೇಲೆ ಕರಡಿ ಭಯಾನಕ ದಾಳಿ ನಡೆಸಿದೆ, ಕರಡಿ ದಾಳಿಗೆ ರಾಮಕೃಷ್ಣ ಗೌಡ ಅವರ ಕಾಲು ಹಾಗೂ ಪಾದಕ್ಕೆ ಗಂಭೀರವಾಗಿ ಗಾಯವಾಗಿದ್ದು, ಹೆಬ್ರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಈ ಕರಡಿ ದಾಳಿಯಿಂದಾಗಿ ಕಬ್ಬಿನಾಲೆ ಪರಿಸರದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದ್ದು, ಕಾಡುಪ್ರಾಣಿಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!