Friday, May 17, 2024
Homeಕರಾವಳಿಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ; ಬಾರ್ ಕೌನ್ಸಿಲ್‌ನಿಂದ ವಕೀಲ ರಾಜೇಶ್ ಅಮಾನತು!

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ; ಬಾರ್ ಕೌನ್ಸಿಲ್‌ನಿಂದ ವಕೀಲ ರಾಜೇಶ್ ಅಮಾನತು!

spot_img
- Advertisement -
- Advertisement -

ಮಂಗಳೂರು: ಇಂಟರ್ನ್‌ಶಿಪ್‌ಗೆಂದು ಬಂದಿದ್ದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್ ರನ್ನು ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ (ಕೆಎಸ್‌ಬಿಸಿ) ಸದಸ್ಯತ್ವದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಮಂಗಳೂರಿನ ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ರಾಜೇಶ್ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದ್ದು, ಗಂಭೀರ ಆರೋಪ ಎದುರಿಸುತ್ತಿರುವ ನ್ಯಾಯವಾದಿಯನ್ನು ಬಾರ್ ಕೌನ್ಸಿಲ್ ಅಧ್ಯಕ್ಷ ಶ್ರೀನಿವಾಸ ಬಾಬು ನೇತೃತ್ವದ ಸಮಿತಿ ಅಮಾನತುಗೊಳಿಸಿದೆ. ರಾಜೇಶ್ ವಿರುದ್ಧ ಆರೋಪದ ಎಫ್‌ಐಆರ್ ಹಾಗೂ ದೂರುಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಸುಮೊಟೊ ಕೇಸನ್ನು ದಾಖಲಿಸಲಾಗಿದೆ.

ನಗರದ ಕರಂಗಲ್ಪಾಡಿಯ ಸೀತಾರಾಮಯ್ಯ ಎಂಬವರ ಪುತ್ರ ರಾಜೇಶ್ ಅವರು 2001ರಲ್ಲಿ ಬಾರ್ ಕೌನ್ಸಿಲ್‌ನಲ್ಲಿ ನೋಂದಣಿ (Kar/1464/2001) ಮಾಡಿಕೊಂಡಿದ್ದರು. ರಾಜೇಶ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನ್ಯಾಯವಾದಿಗಳ ಕಾಯ್ದೆಯ 35ನೇ ಸೆಕ್ಷನ್ ಅಡಿಯಲ್ಲಿ ಮುಂದಿನ ಆದೇಶದವರೆಗೆ ಈ ಅಮಾನತು ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಬಾರ್ ಕೌನ್ಸಿಲ್‌ನಿಂದ ರಾಜೇಶ್ ಅಮಾನತುಗೊಂಡಿದ್ದರಿಂದ ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ವಕಾಲತು ವಹಿಸುವ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ಹಿರಿಯ ನ್ಯಾಯವಾದಿಗಳು ಅಭಿಪ್ರಾಯಪಟ್ಟಿದ್ದಾರೆ.

ಬಾರ್ ಕೌನ್ಸಿಲ್‌ನಿಂದ ರಾಜೇಶ್ ಅಮಾನತುಗೊಂಡಿದ್ದರಿಂದ ಪೊಲೀಸ್ ತನಿಖೆ ಪೂರ್ತಿಗೊಳ್ಳುವ ವರೆಗೆ ಮತ್ತು ಬಾರ್ ಕೌನ್ಸಿಲ್ ಈ ಬಗ್ಗೆ ಮುಂದಿನ ಆದೇಶ ನೀಡುವವರೆಗೆ ನ್ಯಾಯಾಲಯದಲ್ಲಿ ವಕಾಲತು ವಹಿಸುವ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ.

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ರಾಜೇಶ್ ಪರವಾಗಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಂಗಳೂರಿನ ಖ್ಯಾತ ಕ್ರಿಮಿನಲ್ ವಕೀಲರೊಬ್ಬರು ಮಂಗಳೂರಿನ ಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಸೋಮವಾರ ಈ ಅರ್ಜಿ 6ನೇ ಜೆಎಂಎಫ್ ಕೋರ್ಟಿನಲ್ಲಿ ವಿಚಾರಣೆಗೆ ಬರಲಿದೆ ಎನ್ನಲಾಗುತ್ತಿದೆ.

- Advertisement -
spot_img

Latest News

error: Content is protected !!