Thursday, May 2, 2024
Homeಇತರಗಗನಮುಖಿಯಾದ ಪೆಟ್ರೋಲ್, ಡೀಸೆಲ್ ದರ...! ಇಂದು ಮತ್ತೆ ಏರಿಕೆ...!

ಗಗನಮುಖಿಯಾದ ಪೆಟ್ರೋಲ್, ಡೀಸೆಲ್ ದರ…! ಇಂದು ಮತ್ತೆ ಏರಿಕೆ…!

spot_img
- Advertisement -
- Advertisement -

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ತಡೆಯೇ ಇಲ್ಲದಂತಾಗಿದೆ. ಸತತ ನಾಲ್ಕನೇ ದಿನವೂ ತಲಾ 35 ಪೈಸೆ ಹೆಚ್ಚಳವಾಗಿದೆ.

ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಈಗ ₹ 107.24, ಡೀಸೆಲ್ ಬೆಲೆ ₹ 95.97 ಆಗಿದೆ. ಮುಂಬೈನಲ್ಲಿ, ಪ್ರಸ್ತುತ ಪೆಟ್ರೋಲ್ ದರ ಲೀಟರ್‌ಗೆ ₹ 113.12 ಮತ್ತು ಡೀಸೆಲ್ ₹ 104.00 ಆಗಿದೆ.

ಅದೇ ರೀತಿ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ₹ 110.98 ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ₹ 101.86 ಆಗಿದೆ.

ಸ್ಥಳೀಯ ತೆರಿಗೆಗಳನ್ನು ಆಧರಿಸಿ ರಾಜ್ಯದಿಂದ ರಾಜ್ಯಕ್ಕೆ ತೈಲ ಬೆಲೆ ಭಿನ್ನವಾಗಿರುತ್ತದೆ.
ಸೆಪ್ಟೆಂಬರ್ 28 ರಿಂದ 19 ಬಾರಿ ಪೆಟ್ರೋಲ್ ಬೆಲೆಯನ್ನು ಹೆಚ್ಚಿಸಲಾಗಿದ್ದು, ಒಟ್ಟಾರೆಯಾಗಿ, ಲೀಟರ್‌ಗೆ ₹ 5.7 ಹೆಚ್ಚಳವಾಗಿದೆ.

ಇನ್ನು, ಸೆಪ್ಟೆಂಬರ್ 24 ರಿಂದ 22 ಏರಿಕೆಗಳಲ್ಲಿ ಡೀಸೆಲ್ ದರವನ್ನು ಲೀಟರ್‌ಗೆ ₹ 7 ಗಳಷ್ಟು ಹೆಚ್ಚಿಸಲಾಗಿದೆ.

ಇದಕ್ಕೂ ಮೊದಲು ಮೇ 4 ರಿಂದ ಜುಲೈ 17ರ ನಡುವೆ ಪೆಟ್ರೋಲ್ ದರದಲ್ಲಿ ಲೀಟರ್‌ಗೆ ₹11.44 ಗಳಷ್ಟು ಮತ್ತು ಡೀಸೆಲ್ ದರದಲ್ಲಿ ಲೀಟರ್‌ಗೆ ₹ 9.14 ಹೆಚ್ಚಳ ಮಾಡಲಾಗಿತ್ತು.

- Advertisement -
spot_img

Latest News

error: Content is protected !!