Sunday, May 5, 2024
Homeಕರಾವಳಿಬಂಟ್ವಾಳ: ಕಾಮಗಾರಿ ವೇಳೆ ಕುಸಿದು ಬಿದ್ದ ಮೇಲ್ಸೆತುವೆಯ ಪಿಲ್ಲರ್

ಬಂಟ್ವಾಳ: ಕಾಮಗಾರಿ ವೇಳೆ ಕುಸಿದು ಬಿದ್ದ ಮೇಲ್ಸೆತುವೆಯ ಪಿಲ್ಲರ್

spot_img
- Advertisement -
- Advertisement -

ಬಂಟ್ವಾಳ: ಕಾಮಗಾರಿ ವೇಳೆ ಮೇಲ್ಸೆತುವೆಯ ಪಿಲ್ಲರ್ ಕುಸಿದು ಬಿದ್ದ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.ಬಿ.ಸಿ.ರೋಡ್ – ಹಾಸನ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು ಕಲ್ಲಡ್ಕದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಪಿಲ್ಲರ್ ನಿರ್ಮಾಣ ಹಂತದಲ್ಲೇ ಗುರುವಾರ ಕುಸಿದು ಬಿದ್ದಿದೆ.ಅದೃಷ್ಡವಶಾತ್ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ.

ಫೈ ಓವರ್ ಗಾಗಿ ಪಿಲ್ಲರ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಪಿಲ್ಲರ್ ನಿರ್ಮಾಣಕ್ಕಾಗಿ ಕಬ್ಬಿಣದ ರಾಡ್ ಗಳನ್ನು ಜೋಡಿಸುವ ಕಾರ್ಯ ನಡೆಯುತ್ತಿದೆ. ಜೋಡಿಸಿದ್ದ ಕಬ್ಬಿಣದ ರಾಡ್ ಗಳು ಸಂಪೂರ್ಣವಾಗಿ ರಸ್ತೆಗೆ ಕುಸಿದು ಬಿದ್ದಿದೆ. ಬೀಳುವ ಸಂದರ್ಭದಲ್ಲಿ ಸ್ಥಳದಲ್ಲಿ ಯಾವುದೇ ವಾಹನಗಳ ಸಂಚಾರ ಇಲ್ಲದಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

ಕೆಲವು ತಿಂಗಳಿನಿಂದ ಸೇತುವೆ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಆರಂಭದಿಂದಲೇ ವಾಹನ ಸವಾರರು ಹಾಗೂ ಸಾರ್ವಜನಿಕರು ಟ್ರಾಫಿಕ್ ಜಾಮ್, ಧೂಳು ಸಹಿತ ಹಲವು ರೀತಿಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಇದೀಗ ಪಿಲ್ಲರ್ ನಿರ್ಮಾಣದ ಕಬ್ಬಿಣ ಕುಸಿದಿದ್ದು ಕಾಮಗಾರಿಯ ಗುಣಮಟ್ಟ, 40% ಕಮಿಷನ್ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.

- Advertisement -
spot_img

Latest News

error: Content is protected !!