Thursday, June 4, 2026
Homeಕರಾವಳಿಇಂಡೋನೇಷ್ಯಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಬಂಟ್ವಾಳದ ಯುವಕ ಆಯ್ಕೆ

ಇಂಡೋನೇಷ್ಯಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಬಂಟ್ವಾಳದ ಯುವಕ ಆಯ್ಕೆ

- Advertisement -
- Advertisement -

ಬಂಟ್ವಾಳ: ಇಂಡೋನೇಷ್ಯಾ‌ ದೇಶದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಬಂಟ್ವಾಳ ತಾಲೂಕಿನ ಯುವಕ‌ ಆಯ್ಕೆಯಾಗಿದ್ದಾರೆ.

ಕುಕ್ಕಿಪ್ಪಾಡಿ ಹುಣಸೆ ಬೆಟ್ಟು ನಿವಾಸಿ ಮಹಾಬಲ ಶೆಟ್ಟಿ ಎಂಬವರ ಪುತ್ರ ಧನೇಶ್ ಶೆಟ್ಟಿ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದವರಾಗಿದ್ದಾರೆ.

ಇಂಡೋನೇಷ್ಯಾದಲ್ಲಿ ಆರೋಗ್ಯ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಧನೇಶ್ ಅವರು ಕ್ರಿಕೆಟ್ ಬ್ಯಾಟ್ಸ್ ಮನ್ ಆಗಿದ್ದು, ವಾಮದಪದವಿನಲ್ಲಿ‌ ಪ್ರಾಥಮಿಕ, ಬಂಟ್ವಾಳದಲ್ಲಿ ಹೈಸ್ಕೂಲ್ ಮತ್ತು ಪಿಯುಸಿ ಶಿಕ್ಷಣ ಪೂರೈಸಿದ್ದರು.

ಮೂಡಬಿದಿರೆಯಲ್ಲಿ ಡಿಪ್ಲೋಮಾ ಪಡೆದಿರುವ ಧನೇಶ್, ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ಧನೇಶ್ ಶೆಟ್ಟಿ ಶಾಲೆ ಮತ್ತು ಕಾಲೇಜು ದಿನಗಳಲ್ಲಿಯೇ ಕ್ರಿಕೆಟ್ ಆಟದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು.

- Advertisement -

Latest News

error: Content is protected !!