ಬೆಳ್ತಂಗಡಿ: ಪ್ರಕರಣದ ಪಿರ್ಯಾದಿದಾರರಾದ ಕುವೆಟ್ಟು ಗ್ರಾಮ ಬೆಳ್ತಂಗಡಿ ನಿವಾಸಿ ಅಭಿದಾ ಬಾನು (35) ಎಂಬವರ ದೂರಿನಂತೆ, ದಿನಾಂಕ 09.11.2023 ರಂದು ಬೆಳಿಗ್ಗೆ ಪಿರ್ಯಾದಿದಾರರು ಮನೆಯಲ್ಲಿ ಇರದಿದ್ದ ವೇಳೆ, ಪಿರ್ಯಾದಿದಾರರ ಪರಿಚಯದ ಸಿದ್ದಿಕ್ ಎಂಬಾತನು ಪಿರ್ಯಾದಿದಾರರ ಮನೆಯಿಂದ ಪಿರ್ಯಾದಿರವರ ಅಂದಾಜು ರೂ 8000/- ಮೌಲ್ಯದ ಮೊಬೈಲನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
ಆ ಬಳಿಕ ಸದ್ರಿ ಮೊಬೈಲ್‌ನಲ್ಲಿ, ಪೋನ್ ಪೇ ಮುಖಾಂತರ ಅವರ ಖಾತೆಯಲ್ಲಿದ್ದ ರೂ 64.000/- ಹಣದ ಪೈಕಿ, ರೂ 34.000/- ರೂ ಹಣವನ್ನು ಜಾಪರ್ ಎಂಬಾತನಿಗೂ, ರೂ 25.000/- ಹಣವನ್ನು ಮಹಮ್ಮದ್ ಎಂಬಾತನಿಗೂ ಹಾಗೂ ರೂ 2000/- ಹಣವನ್ನು ಸಿರಾಜ್ ಎಂಬಾತನಿಗೂ ವರ್ಗಾವಣೆ ಮಾಡಿದ್ದು, ಆರೋಪಿಗಳು ಪಿರ್ಯಾದಿದಾರರ ಗಂಡನ ಸ್ನೇಹಿತರಾಗಿರುವುದರಿಂದ ಮೊಬೈಲ್ ಮತ್ತು ಹಣವನ್ನು ವಾಪಸು ನೀಡಬಹುದೆಂದು ಕಾದಿದ್ದು, ಈವರೆಗೆ ವಾಪಾಸ್ ನೀಡದಿರುವ ಹಿನ್ನೆಲೆಯಲ್ಲಿ ದಿನಾಂಕ:23.11.2023 ರಂದು ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ ನಂ 116/2023 ಕಲಂ; 380,411ಭಾ ದಂ ಸಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


