Friday, May 17, 2024
Homeಅಪರಾಧಡೆತ್ ಸರ್ಟಿಫಿಕೇಟ್ ಗೆ 13 ಸಾವಿರ ಲಂಚ;ಮರಣ ದೃಢೀಕರಣ ಪತ್ರ ಮಾಡಿಕೊಟ್ಟದಕ್ಕೆ ಲಂಚ ಸ್ವೀಕರಿಸುವಾಗ ವಿಎ...

ಡೆತ್ ಸರ್ಟಿಫಿಕೇಟ್ ಗೆ 13 ಸಾವಿರ ಲಂಚ;ಮರಣ ದೃಢೀಕರಣ ಪತ್ರ ಮಾಡಿಕೊಟ್ಟದಕ್ಕೆ ಲಂಚ ಸ್ವೀಕರಿಸುವಾಗ ವಿಎ ಲೋಕಾ ಬಲೆಗೆ‌‌; ಮಂಗಳೂರು ತಾಲೂಕಿನ‌ ಸುರತ್ಕಲ್ ನಲ್ಲಿ ಟ್ರ್ಯಾಪ್

spot_img
- Advertisement -
- Advertisement -

ಮಂಗಳೂರು: ಚೇಳ್ಳಾರು ಗ್ರಾಮದ ವ್ಯಕ್ತಿಯೊಬ್ಬನ ಅಜ್ಜನ ಡೆತ್ ಸರ್ಟಿಫಿಕೇಟ್ ಗೆ  13 ಸಾವಿರ ರೂಪಾಯಿ ಲಂಚ ಬೇಡಿಕೆಯಿಟ್ಟು, ಸ್ವೀಕರಿಸಿದ ಆರೋಪದಡಿಯಲ್ಲಿ ಮಂಗಳೂರು ತಾಲೂಕಿನ‌ ಸುರತ್ಕಲ್ ಗ್ರಾಮದ ವಿಎ ಯನ್ನು ಲೋಕಾಯುಕ್ತರು ಬಂಧಿಸಿದ್ದಾರೆ.

ಫಿರ್ಯಾದುದಾರರಿಗೆ ತನ್ನ ತಾಯಿಯ ಹೆಸರಿನಲ್ಲಿ ಮಂಗಳೂರು ತಾಲೂಕಿನ ಚೇಳ್ಳಾರು ಗ್ರಾಮದ ಚೇಳ್ಳಾರು ಎಂಬಲ್ಲಿ ಒಟ್ಟು 42 ಸೆಂಟ್ಸ್ ಜಮೀನಿದ್ದು, ಸದ್ರಿ ಜಮೀನಿನಲ್ಲಿ 5 ಸೆಂಟ್ಸ್ ಜಮೀನನ್ನು ತನ್ನ ನೆರೆ ಮನೆಯವರಿಗೆ ಮಾರಾಟ ಮಾಡಲು ತೀರ್ಮಾನಿಸಿದ್ದು, ಈ ಬಗ್ಗೆ ದಾಖಲಾತಿಗಳನ್ನು ತಯಾರು ಮಾಡಿ ಸದ್ರಿ ಜಮೀನನ್ನು ಮಾರಾಟ ಮಾಡಲು ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ, ವಿಚಾರಿಸಿದಾಗ ಫಿರ್ಯಾದಿದಾರರ ಅಜ್ಜನ ಮರಣ ಪ್ರಮಾಣ ಪತ್ರ ಮತ್ತು ಸಂತತಿ ನಕ್ಷೆ ಮಾಡಿಕೊಂಡು ಬನ್ನಿ ಎಂದು ತಿಳಿಸಿರುತ್ತಾರೆ. ಅದರಂತೆ ಫಿರ್ಯಾದಿದಾರರು ಸೆಪ್ಟೆಂಬರ್ ತಿಂಗಳಿನಲ್ಲಿ ಚೇಳ್ಯಾರು ಗ್ರಾಮಕರಣಿಕರ ಕಚೇರಿಗೆ ಹೋಗಿ ತನ್ನ ಅಜ್ಜನ ಮರಣದ ದೃಢಪತ್ರಕ್ಕೆ ಅರ್ಜಿ ಸಲ್ಲಿಸಿರುತ್ತಾರೆ.

ನಂತರದಲ್ಲಿ ಫಿರ್ಯಾದಿದಾರರು ಎರಡು ಮೂರು ಸಲ ಚೇಳ್ಳಾರು ಗ್ರಾಮಕರಣಿಕರ ಕಚೇರಿಗೆ ಹೋಗಿದ್ದು ದೃಢೀಕರಣ ಪತ್ರದ ಬಗ್ಗೆ ಶ್ರೀ ವಿಜಿತ್, ಗ್ರಾಮ ಆಡಳಿತ ಅಧಿಕಾರಿ, ಚೇಳ್ಳಾರು ಗ್ರಾಮ ಇವರಲ್ಲಿ ವಿಚಾರಿಸಿದ್ದು, ಯಾವುದೇ ಉತ್ತರ ನೀಡಿರುವುದಿಲ್ಲ. ನಂತರ ಫಿರ್ಯಾದಿಧಾರರು ಏನಾಂಕ 20.11.2023 ರಂದು ಗ್ರಾಮ ಆಡಳಿತ ಅಧಿಕಾರಿಯವರ ಮೊಬೈಲ್ ನಂಬರಿಗೆ ಕಾಲ್ ಮಾಡಿ ಮಾತನಾಡಿದಾಗ ನಿಮ್ಮ ಅಜ್ಜನ ಮರಣದ ದೃಢೀಕರಣ ಪತ್ರ ರೆಡಿ ಇದೆ, ಚೇಳ್ಯಾರು ಗ್ರಾಮಕರಣಿಕರ ಕಚೇರಿಗೆ ಬನ್ನಿ, ಬರುವಾಗ 15,000/- ತೆಗೆದುಕೊಂಡು ಬನ್ನಿ ಎಂದು ತಿಳಿಸಿರುತ್ತಾರೆ. ಆದರೆ ಅಷ್ಟು ಹಣ ಪಿರ್ಯಾದಿದಾರರು ತನ್ನಲ್ಲಿ ಇಲ್ಲ ಎಂದಾಗ ನಾಳೆ ಆದ್ರು ತಂದು ಕೊಡಿ ಎಂದು ತಿಳಿಸಿರುತ್ತಾರೆ ಆಗ ಪಿರ್ಯಾದಿದಾರರು ಅಷ್ಟು ಹಣ ನನ್ನಲ್ಲಿ ಇಲ್ಲ ಎಂದು ತಿಳಿಸಿರುತ್ತಾರೆ.

ಫಿರ್ಯಾದಿದಾರರು ಏನಾಂಕ 22.11.2023 ರಂದು ವಾಪಾಸ್ಸು ಚೇಳ್ಳಾರು ಗ್ರಾಮಕರಣಿಕರ ಕಚೇಲಗೆ ಹೋಗಿ ಶ್ರೀ ವಿಜಿತ್, ಗ್ರಾಮ ಆಡಳಿತ ಅಧಿಕಾರಿ, ಚೇಳ್ಳಾರು ಗ್ರಾಮ ಇವರಲ್ಲಿ ಮಾತನಾಡಿದಾಗ ಅವರು ಪಿರ್ಯಾದಿದಾರರ ಅಜ್ಜನ ಮರಣದ ದೃಢೀಕರಣ ಪತ್ರವನ್ನು ನೀಡಿ, ಮರಣ ದೃಢೀಕರಣ ಪತ್ರವನ್ನು ಮಾಡಿ ಕೊಟ್ಟದ್ದಕ್ಕಾಗಿ ರೂ 15,000/-ವನ್ನು ಸುರತ್ಕಲ್ ನಾಡಕಛೇರಿಗೆ ಬಂದು ಕೊಡಬೇಕು ಎಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಆಗ ಫಿರ್ಯಾದಿದಾರರು ಅವರಲ್ಲಿ ಸ್ವಲ್ಪ ಕಮ್ಮಿ ಮಾಡಿ ಎಂದಾಗ ಗ್ರಾಮಕರಣಿಕರು ಆಯಿತು ಅದರಲ್ಲಿ ಎರಡು ಸಾವಿರ ಕಮ್ಮಿ ಮಾಡಿ ಕೊಡಿ ಎಂದು ಅಜ್ಜನ ಮರಣ ದೃಡೀಕರಣ ಪತ್ರವನ್ನು ಮಾಡಿಕೊಟ್ಟ ಪ್ರತಿಫಲಕ್ಕಾಗಿ 13,000/- ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ.

ಈ ದಿನ ಮಂಗಳೂರು ತಾಲೂಕು ಚೇಳ್ಯಾರು ಗ್ರಾಮದ, ಗ್ರಾಮ ಅಡಳಿತ ಅಧಿಕಾರಿ, ಶ್ರೀ ವಿಜಿತ್ ರವರು ಫಿರ್ಯಾದಿದಾರರಿಂದ ರೂ.13,000/- (ಹದಿಮೂರು ಸಾವಿರ) ಲಂಚದ ಹಣವನ್ನು ಸ್ವೀಕರಿಸುವಾಗ ಸ್ಥಳದಲ್ಲಿಯೇ ಸಿಕ್ಕಿಬಿದ್ದಿರುತ್ತಾರೆ. ಸದರಿ ಆರೋಪಿಯನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಶ್ರೀ ಸಿ.ಎ. ಸೈಮನ್, ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಮಂಗಳೂರು ರವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಚಲುವರಾಜು, ಚಿ, ಹಾಗೂ ಪೊಲೀಸ್ ನಿರೀಕ್ಷಕರಾದ ಶ್ರೀ ಅಮಾನುಲ್ಲಾ.ಎ, ಶ್ರೀ ಸುರೇಶ್ ಕುಮಾರ್.ಪಿ ಇವರು ಸಿಬ್ಬಂದಿಗಳ ಜೊತೆ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿರುತ್ತಾರೆ.

- Advertisement -
spot_img

Latest News

error: Content is protected !!