Saturday, June 6, 2026
Homeತಾಜಾ ಸುದ್ದಿಬಂಟ್ವಾಳ: ಫಲಾನುಭವಿಗಳಿಗೆ ಪವರ್ ಟಿಲ್ಲರ್ ಹಸ್ತಾಂತರ

ಬಂಟ್ವಾಳ: ಫಲಾನುಭವಿಗಳಿಗೆ ಪವರ್ ಟಿಲ್ಲರ್ ಹಸ್ತಾಂತರ

- Advertisement -
- Advertisement -

ಬಂಟ್ವಾಳ: ಕೃಷಿ ಇಲಾಖೆಯಿಂದ ರೈತರಿಗೆ 50 ಶೇ. ಸಹಾಯಧನದಲ್ಲಿ ನೀಡಲ್ಪಟ್ಟ ಪವರ್ ಟಿಲ್ಲರ್ ಗಳನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬಿ.ಸಿ.ರೋಡಿನಲ್ಲಿರುವ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ಫಲಾನುಭವಿಗಳಿಗೆ ಹಸ್ತಾಂತರಿಸಿದರು.

ಫಲಾನುಭವಿಗಳಾದ ಜಿ.ವಿಷ್ಣುಮೂರ್ತಿ ಭಟ್ ಬಡಗಬೆಳ್ಳೂರು ಹಾಗೂ ದುಲ್ಸಿನ್ ಡಿಸೋಜ ಅವರು ಶಾಸಕರಿಂದ ಪವರ್ ಟಿಲ್ಲರ್ ಪಡೆದರು. ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕ ನಾರಾಯಣ ಶೆಟ್ಟಿ ಹಾಗೂ ಸಿಬಂದಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!