Wednesday, June 24, 2026
Homeಕರಾವಳಿಮಂಗಳೂರುಬಂಟ್ವಾಳ ; ಅಪ್ರಾಪ್ತ ಬಾಲಕರಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ;  2 ಪ್ರತ್ಯೇಕ ಪ್ರಕರಣಗಳಲ್ಲಿ...

ಬಂಟ್ವಾಳ ; ಅಪ್ರಾಪ್ತ ಬಾಲಕರಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ;  2 ಪ್ರತ್ಯೇಕ ಪ್ರಕರಣಗಳಲ್ಲಿ ವಾಹನಗಳ ಮಾಲೀಕರಿಗೆ ತಲಾ ರೂ 25,000/- ದಂಡ ವಿಧಿಸಿದ ಕೋರ್ಟ್

- Advertisement -
- Advertisement -

ಬಂಟ್ವಾಳ ; ಅಪ್ರಾಪ್ತ ಬಾಲಕರಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ  2 ಪ್ರತ್ಯೇಕ ಪ್ರಕರಣಗಳಲ್ಲಿ ವಾಹನಗಳ ಮಾಲೀಕರಿಗೆ ತಲಾ ರೂ 25,000/- ದಂಡ ವಿಧಿಸಿದ ಕೋರ್ಟ್ ಆದೇಶ ನೀಡಿದೆ.

ದಿನಾಂಕ: 06.04.2026 ರಂದು ಬಂಟ್ವಾಳ ಸಂಚಾರ ಠಾಣಾ ವ್ಯಾಪ್ತಿಯ ಮೆಲ್ಕಾರ್‌ ನಲ್ಲಿ KA-19-HT-9694 ನೇ ನೋಂದಣಿಯ ದ್ವಿಚಕ್ರ ವಾಹನವನ್ನು ಹಾಗೂ ದಿನಾಂಕ:28.04.2026 ರಂದು ಬಿಸಿ ರೋಡ್‌ ನಲ್ಲಿ ಬಳಿ, KA05KG6785  ನೇ ನೋಂದಣಿಯ ದ್ವಿಚಕ್ರ ವಾಹನವನ್ನು ಅಪ್ರಾಪ್ತ ಬಾಲಕರು ಚಾಲನೆ ಮಾಡಿರುವುದು ಬಂಟ್ವಾಳ ಸಂಚಾರ ಠಾಣಾ ಪೊಲೀಸರು ವಾಹನ ತಪಾಸಣೆಯ ವೇಳೆ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕರಿಗೆ ದ್ವಿಚಕ್ರ ವಾಹನ ಚಾಲನೆಗೆ ಅವಕಾಶ ನೀಡಿದ ಆ ವಾಹನಗಳ ಮಾಲೀಕರ ವಿರುದ್ದ ಬಂಟ್ವಾಳ ಸಂಚಾರ ಠಾಣಾ ಪೊಲೀಸರು ಎಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ದೋಷಾರೋಣ ಪತ್ರ ಸಲ್ಲಿಸಿದ್ದರು. ದಿನಾಂಕ:18.05.2026 ರಂದು ಆ ಎರಡೂ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯವು ಎರಡೂ ವಾಹನದ ಮಾಲೀಕರಿಗೆ ತಲಾ ರೂ.25,000/- ದಂಡ ವಿಧಿಸಿ ಆದೇಶಿಸಿದೆ.

- Advertisement -

Latest News

error: Content is protected !!