- Advertisement -
- Advertisement -
ದಕ್ಷಿಣ ಕನ್ನಡ/ಬಂಟ್ವಾಳ: ತಾಲೂಕಿನ ಫರಂಗಿಪೇಟೆ ಸಮೀಪ ಕುಟುಂಬ ಕಲಹ ಸಂಬಂಧ ಗುಂಪೊಂದು ಮನೆಗೆ ನುಗ್ಗಿ ಮನೆಮಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಫರಂಗಿಪೇಟೆ ಸಮೀಪದ ಕುಂಪನಮಜಲು ಎಂಬಲ್ಲಿ ಘಟನೆ ನಡೆದಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಆರೋಪ ಸಂಬಂಧ ಈವರೆಗೆ ಐವರ ಮೇಲೆ ಪ್ರಕರಣ ದಾಖಲಾಗಿದೆ. ಹಲ್ಲೆಯಿಂದ ಕುಂಪನಮಜಲು ನಿವಾಸಿಗಳಾದ ಸುಮಾರು 6 ಮಂದಿಯನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
- Advertisement -