Tuesday, December 3, 2024
Homeಕರಾವಳಿಉಜಿರೆ: ಯಕ್ಷಗಾನ ಕಲಾವಿದರಿಗೆ ನೆರವಾದ ಶಾಸಕ ಹರೀಶ್​ ಪೂಂಜಾ

ಉಜಿರೆ: ಯಕ್ಷಗಾನ ಕಲಾವಿದರಿಗೆ ನೆರವಾದ ಶಾಸಕ ಹರೀಶ್​ ಪೂಂಜಾ

spot_img
- Advertisement -
- Advertisement -

ಬೆಳ್ತಂಗಡಿ: ಯಕ್ಷಗಾನದಿಂದಲೇ ಬದುಕು ಕಟ್ಟಿಕೊಂಡಿದ್ದ ಕಲಾವಿದರು ಹಾಗೂ ನೇಪಥ್ಯ ಕಲಾವಿದರಿಗೆ ಶಾಸಕ ಹರೀಶ್ ಪೂಂಜಾ ನೆರವಾಗಿದ್ದಾರೆ.
ತಾಲೂಕಿನ ಸುಮಾರು 150 ಕಲಾವಿದರಿಗೆ ‘ಶ್ರಮಿಕ ನೆರವು’ ಆಹಾರ ಸಾಮಗ್ರಿ ಕಿಟ್​ಗಳನ್ನು ಉಜಿರೆ ಜನಾರ್ಧನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ ಮೂಲಕ ವಿತರಿಸಿದರು.

ಸುಂಕದಕಟ್ಟೆ ಮೇಳದ ಸುಮಾರು 20 ಕಲಾವಿದರಿಗೆ ಹಿರಿಯ ಕಲಾವಿದ ಶಿತಿಕಂಠ ಭಟ್ ಉಜಿರೆ ಹಾಗೂ ಹಿಮ್ಮೇಳ ವಾದಕ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಇವರ ವಿನಂತಿಯಂತೆ ತಲಾ 1 ಸಾವಿರದಿಂದ 2 ಸಾವಿರದವರೆಗೆ ಸಹಾಯಧನವನ್ನು ನೀಡುವುದರ ಮೂಲಕ ಶಾಸಕರು ಕಲಾವಿದರಿಗೆ ನೆರವಾಗಿದ್ದಾರೆ.
ಎಲ್ಲಾ ಜನಪ್ರತಿನಿಧಿಗಳು ಆಯಾ ಕ್ಷೇತ್ರದ ಕಲಾವಿದರಿಗೆ ಬೆನ್ನೆಲುಬಾಗಿ ನಿಲ್ಲಬೇಕಿದೆ. ಶಾಸಕರ ಈ ಕಾರ್ಯಕ್ಕೆ ಕಲಾವಿದರು, ಮೇಳದ ವ್ಯವಸ್ಥಾಪಕರು ಧನ್ಯವಾದ ಅರ್ಪಿಸಿದ್ದಾರೆ.

- Advertisement -
spot_img

Latest News

error: Content is protected !!