Sunday, May 12, 2024
Homeಇತರಎಟಿಎಂ ನಲ್ಲಿ ಹಣ ಇಲ್ಲದಿದ್ದರೆ ಬ್ಯಾಂಕ್ ಗಳಿಗೆ ದಂಡ :ಆರ್ ಬಿಐ ಹೊಸ ನಿಯಮ!!

ಎಟಿಎಂ ನಲ್ಲಿ ಹಣ ಇಲ್ಲದಿದ್ದರೆ ಬ್ಯಾಂಕ್ ಗಳಿಗೆ ದಂಡ :ಆರ್ ಬಿಐ ಹೊಸ ನಿಯಮ!!

spot_img
- Advertisement -
- Advertisement -

ನವದೆಹಲಿ:ಆರ್ ಬಿಐ ಬ್ಯಾಂಕುಗಳ ಎಟಿಎಂಗಳು ತಿಂಗಳಲ್ಲಿ ಒಟ್ಟು 10 ಗಂಟೆಗಳಿಗಿಂತ ಹೆಚ್ಚು ಕಾಲ ಖಾಲಿಯಾಗಿದ್ದರೆ ದಂಡ ವಿಧಿಸಲಾಗುವುದು ಎಂದು ಆರ್ ಬಿ ಐ ಸುತ್ತೋಲೆಯಲ್ಲಿ ಹೇಳಿದೆ.

ಎಟಿಎಂನಲ್ಲಿ ನಗದು ಇಲ್ಲವೆಂದರೆ ಇದರ ಹೊಣೆಯನ್ನು ಬ್ಯಾಂಕ್ ಭರಿಸಬೇಕು. ಆಗಸ್ಟ್ 1 ರಿಂದ ಆರ್ ಬಿ ಐ ಬ್ಯಾಂಕುಗಳ ಎಟಿಎಂಗಳು ತಿಂಗಳಲ್ಲಿ ಒಟ್ಟು 10 ಗಂಟೆಗಳಿಗಿಂತ ಹೆಚ್ಚು ಕಾಲ ಖಾಲಿಯಾಗಿದ್ದರೆ ಹಾಗೂ ನಿಗದಿತ ಸಮಯದಲ್ಲಿ ಎಟಿಎಂ ನಗದು ತುಂಬದಿದ್ದರೆ, ಬ್ಯಾಂಕ್ ಮೇಲೆ ದಂಡ ವಿಧಿಸಲಾಗುವುದು ಎಂದು ಹೇಳಿದೆ.

ಎಟಿಎಂಗಳ ಮೂಲಕ ಸಾರ್ವಜನಿಕರಿಗೆ ನಗದು ಸಿಗಲಿ ಎಂಬ ಕಾರಣಕ್ಕೆ ಆರ್ ಬಿಐ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.

ಒಂದು ವೇಳೆ ತಿಂಗಳಲ್ಲಿ 10 ಗಂಟೆಗಳಿಗಿಂತ ಹೆಚ್ಚು ಕಾಲ ಎಟಿಎಂನಲ್ಲಿ ನಗದು ಇಲ್ಲದಿದ್ದರೆ, ಆ ಸಂದರ್ಭದಲ್ಲಿ 10,000 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಎಟಿಎಂಗೆ ನಗದು ಹಾಕಲು ಬ್ಯಾಂಕ್ ಯಾವುದೇ ಕಂಪನಿಗಳ ಸೇವೆಗಳನ್ನು ತೆಗೆದುಕೊಳ್ಳುತ್ತಿದ್ದರೂ, ಬ್ಯಾಂಕ್ ಸ್ವತಃ ದಂಡವನ್ನು ಪಾವತಿಸಬೇಕಾಗುತ್ತದೆ.

- Advertisement -
spot_img

Latest News

error: Content is protected !!