Sunday, June 7, 2026
Homeಕರಾವಳಿಬೆಳ್ತಂಗಡಿ : ಗ್ರಾ.ಪಂ ಮಹಿಳಾ ಸಿಬ್ಬಂದಿ ಅನಾರೋಗ್ಯದಿಂದ ನಿಧನ

ಬೆಳ್ತಂಗಡಿ : ಗ್ರಾ.ಪಂ ಮಹಿಳಾ ಸಿಬ್ಬಂದಿ ಅನಾರೋಗ್ಯದಿಂದ ನಿಧನ

- Advertisement -
- Advertisement -

ಬೆಳ್ತಂಗಡಿ  : ಬಂದಾರು ಗ್ರಾಮ ಪಂಚಾಯತ್ ಮಹಿಳಾ ಸಿಬ್ಬಂದಿ  ಲಲಿತಾ(38) ಅನಾರೋಗ್ಯದಿಂದ ಡಿ.15 ರಂದು ಮೊಗ್ರುವಿನಲ್ಲಿ ನಿಧನರಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮ ಪಂಚಾಯತ್ ಜನಸ್ನೇಹಿ ಉದ್ಯೋಗ ಖಾತ್ರಿ ಡಾಟಾ ಎಂಟ್ರಿ ಸಿಬ್ಬಂದಿಯಾಗಿ ಕಳೆದ 14 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಮೊಗ್ರು ಗ್ರಾಮದ ನಾಯಿಮಾರು ಲಲಿತ (38) ಇವರು ಅನಾರೋಗ್ಯದಿಂದ ಇಂದು ಬೆಳಗ್ಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಜನರಿಗೆ ನಗುಮೊಗದ ಸೇವೆ ನೀಡುತ್ತಿದ್ದ ಇವರು ಜನರ ಅಪಾರ ಪ್ರೀತಿಗೆ ಪಾತ್ರರಾಗಿದ್ದರು. ಲಲಿತಾ ಅವರ ನಿಧನಕ್ಕೆ ಗ್ರಾ.ಪಂ. ಅಧ್ಯಕ್ಷರಾದ ಪರಮೇಶ್ವರಿ ಗೌಡ, ಉಪಾಧ್ಯಕ್ಷರಾದ ಗಂಗಾಧರ, ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ, ಗ್ರಾ.ಪಂ. ಸದಸ್ಯರು ಸಿಬ್ಬಂದಿ ವರ್ಗ ಹಾಗೂ ಊರಿನ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮೃತರು ಪತಿ ಲವ, ಗಂಡು ಮಕ್ಕಳಾದ ಸ್ವಸ್ತಿಕ್, ಸಾಕ್ಷಿತ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

- Advertisement -

Latest News

error: Content is protected !!