Friday, May 10, 2024
Homeತಾಜಾ ಸುದ್ದಿವಿಜಯಪುರದಲ್ಲಿ 2 ವರ್ಷದ ಬಾಲಕ ಕೊಳವೆ ಬಾವಿಗೆ ಬಿದ್ದ ಪ್ರಕರಣ; ಫಲಿಸಿದ ಕೋಟ್ಯಂತರ ಕನ್ನಡಿಗರ ಪ್ರಾರ್ಥನೆ;...

ವಿಜಯಪುರದಲ್ಲಿ 2 ವರ್ಷದ ಬಾಲಕ ಕೊಳವೆ ಬಾವಿಗೆ ಬಿದ್ದ ಪ್ರಕರಣ; ಫಲಿಸಿದ ಕೋಟ್ಯಂತರ ಕನ್ನಡಿಗರ ಪ್ರಾರ್ಥನೆ; ಕೊಳವೆ ಬಾವಿಯಿಂದ ಸುರಕ್ಷಿತವಾಗಿ ಮಗುವಿನ ರಕ್ಷಣೆ

spot_img
- Advertisement -
- Advertisement -

ವಿಜಯಪುರ : ರವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಆಟವಾಡುತ್ತಾ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಬಾಲಕ ಸಾತ್ವಿಕ ನನ್ನು ಸತತ 20 ಗಂಟೆಗಳ ಕಾರ್ಯಾಚರಣೆಯ ಮೂಲಕ ರಕ್ಷಣೆ ಮಾಡಲಾಗಿದೆ

ವಿಚಾರ ಗೊತ್ತಾದಾಗಿನಿಂದ  ಇಡೀ ಕರುನಾಡಿನ ಜನತೆ ಮಗು ಸುರಕ್ಷಿತವಾಗಿ ವಾಪಾಸು ಬರಲಿ ಅಂತಾ ಪ್ರಾರ್ಥಿಸುತ್ತಿದ್ದರು. ಕೊನೆಗೂ ಕೋಟ್ಯಂತರ ಮಂದಿ ಹಾರೈಕೆ ಫಲಿಸಿದ್ದು  ಮಗುವನ್ನು ಜೀವಂತವಾಗಿ ರಕ್ಷಣೆ ಮಾಡಲಾಗಿದೆ.

ನಿನ್ನೆ ಘಟನೆ ತಿಳಿದ ತಕ್ಷಣ ಸ್ಥಳಕ್ಕೆ ಎಸ್‌ಡಿಆರ್‌ಎಫ್ ತಂಡ, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಇಂಡಿ ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಸೇರಿದಂತೆ ವಿವಿಧ ರಕ್ಷಣಾ ತಂಡಗಳು ಸತತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು. ಅಲ್ಲದೆ ಇಂದು ಬೆಳಿಗ್ಗೆ ಹೈದರಾಬಾದ್ನಿಂದ ಎನ್ ಡಿ ಆರ್ ಎಫ್ ತಂಡ ಕೂಡ ಎಂಟ್ರಿ ಕೊಟ್ಟಿದ್ದು ಇದೀಗ ಇವರೆಲ್ಲರ ಸತತ ಶ್ರಮದಿಂದಾಗಿ ಬಾಲಕ ಸಾತ್ವಿಕ್ ಬದುಕಿ ಬಂದಿದ್ದಾನೆ.

- Advertisement -
spot_img

Latest News

error: Content is protected !!