Monday, April 29, 2024
Homeಕರಾವಳಿಬೆಳ್ತಂಗಡಿ : ಅಯೋಧ್ಯೆ ಉದ್ಘಾಟನಾ ದಿನದಂದು ಗಂಡು ಮಗು ಜನನ:ಮಗುವಿಗೆ ಶ್ರೀರಾಮ ಹೆಸರು ಇಡಲು ತೀರ್ಮಾನಿಸಿದ...

ಬೆಳ್ತಂಗಡಿ : ಅಯೋಧ್ಯೆ ಉದ್ಘಾಟನಾ ದಿನದಂದು ಗಂಡು ಮಗು ಜನನ:ಮಗುವಿಗೆ ಶ್ರೀರಾಮ ಹೆಸರು ಇಡಲು ತೀರ್ಮಾನಿಸಿದ ದಂಪತಿ

spot_img
- Advertisement -
- Advertisement -

ಬೆಳ್ತಂಗಡಿ : ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮ ಜ.22 ರಂದು ನಡೆದಿದ್ದು.‌ ಇದೆ ದಿನ ಬೆಳ್ತಂಗಡಿ ತಾಲೂಕಿನ ಉಜಿರೆ ಬೆನಕ ಆಸ್ಪತ್ರೆಯಲ್ಲಿ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು.ಈ ದಂಪತಿ ಇದೀಗ ಸಂತೋಷದಲ್ಲಿದ್ದಾರೆ.

ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಬಸನಬೆಟ್ಟು ನಿವಾಸಿ ಪವಿತ್ರ ಜ.22 ರಂದು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಬೆಳಗ್ಗೆ 6:20 ಕ್ಕೆ ಗಂಡು ಮಗುವಿಗೆ ನಾರ್ಮಲ್ ಅಗಿ ಜನ್ಮ ನೀಡಿದ್ದು. ತಾಯಿ ಮಗು ಆರೋಗ್ಯವಾಗಿದ್ದಾರೆ. ಮಗುವಿನ ತಂದೆ ಖುಷಿಯಿಂದ ಬೆಂಗಳೂರಿನಿಂದ ಆಸ್ಪತ್ರೆಗೆ ಬಂದಿದ್ದು ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ.ಅದಲ್ಲದೆ ನಿನ್ನೆ ಅಯೋಧ್ಯೆ ಉದ್ಘಾಟನಾ ದಿನ ಗಂಡು ಮಗುವಿಗೆ ಜನ್ಮ ನೀಡುವ ಬಗ್ಗೆ ನಿರೀಕ್ಷಿಸಿಲ್ಲ. ಆದ್ದರಿಂದ ಮಗುವಿಗೆ ಶ್ರೀರಾಮ ಎಂದು ಹೆಸರಿಡಲು ಯೋಚಿಸುತ್ತೇವೆ ಎಂದಿದ್ದಾರೆ.

ಸುಳ್ಯದ ಸುರೇಶ್ ಮತ್ತು ಪಡಂಗಡಿಯ ಪವಿತ್ರ ದಂಪತಿಗೆ 6 ವರ್ಷದ ಹೆಣ್ಣು ಮಗು ಇದೆ. ಇದೀಗ ಎರಡನೇ ಮಗುವಿನ ಡೆಲಿವರಿಗೆ ಫೆ.3 ರಂದು ಡೇಟ್ ಉಜಿರೆಯ ಬೆನಕ ಆಸ್ಪತ್ರೆಯ ಡಾಕ್ಟರ್ ಅಂಕಿತಾ ಭಟ್ ನೀಡಿದ್ದರು. ಆದ್ರೆ ಪವಿತ್ರ ಅವರಿಗೆ ಜ.21 ರಂದು ರಾತ್ರಿ ನೋವು ಕಾಣಿಸಿದೆ ತಕ್ಷಣ ಉಜಿರೆ ಬೆನಕ ಆಸ್ಪತ್ರೆಗೆ ಬಂದು ದಾಖಲಾಗಿದ್ದರು ಜ.22 ರಂದು ಬೆಳಗ್ಗೆ 6:20 ಕ್ಕೆ ನಾರ್ಮನ್ ಡೆಲಿವರಿ ಅಗಿದೆ. ತಂದೆ ಸುರೇಶ್ ಬೆಂಗಳೂರು ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಬೆಳಗ್ಗೆ ಮಗು ಜನನ ಅಗಿರುವ ಬಗ್ಗೆ ಮಾಹಿತಿ ತಿಳಿದು ನೇರ ಬಸ್ ಹತ್ತಿ ಸಂಜೆ ಆಸ್ಪತ್ರೆಗೆ ಬಂದಿದ್ದಾರೆ.

ಇನ್ನೂ ಮಗುವಿನ ತಾಯಿ ಪವಿತ್ರ ಅವರು ಅಯೋಧ್ಯೆ ಉದ್ಘಾಟನಾ ದಿನ ನಾನು ಗಂಡು ಮಗುವಿಗೆ ಜನ್ಮ ನೀಡುತ್ತೇನೆ ಎಂದು ಎನಿಸರಲಿಲ್ಲ. ತುಂಬಾ ಖುಷಿಯಾಗುತ್ತಿದೆ.‌ಇ ನ್ನೂ ಮಗುವಿಗೆ ಶ್ರೀರಾಮ ಎಂದು ಹೆಸರು ಇಡುವ ಬಗ್ಗೆ ನೋಡಬೇಕು. ಯಾಕೆಂದರೆ ನನಗೆ ಫೆ.3 ರಂದು ಡೆಲಿವರಿ ಡೇಟ್ ಡಾಕ್ಟರ್ ನೀಡಿದ್ದರು. ಆದ್ರೆ ರಾಮ ಮಂದಿರ ಉದ್ಘಾಟನೆ ದಿನ ಗೊತ್ತಿಲ್ಲದೆ ಜನನವಾಗಿದ್ದು ಎಂದಿದ್ದಾರೆ. ತಂದೆ ಕೂಡ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ದಿನ ಗಂಡು ಮಗುವಿನ ಜನನದಿಂದ ಸಂತೋಷದಿಂದ ಇದ್ದು‌. ಅವರು ಕೂಡ ಮಗುವಿನ ಶ್ರೀರಾಮ ಎಂದು ಹೆಸರು ಇಡುವ ಬಗ್ಗೆ ಅಲೋಚನೆ ಮಾಡಬೇಕಾಗಿದೆ ಎಂದು ಮಹಾಎಕ್ಸ್ ವೆಬ್ ಸೈಟ್ ಗೆ ದಂಪತಿ ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!