Thursday, June 4, 2026
Homeಕರಾವಳಿಅನಂತ ಪದ್ಮನಾಭ ದೇವಸ್ಥಾನದ ಮುಂಭಾಗದಲ್ಲಿ ನೆರವೇರಿದ ದೇವ ಮೊಸಳೆ ಬಬಿಯಾ ಅಂತ್ಯ ಸಂಸ್ಕಾರ

ಅನಂತ ಪದ್ಮನಾಭ ದೇವಸ್ಥಾನದ ಮುಂಭಾಗದಲ್ಲಿ ನೆರವೇರಿದ ದೇವ ಮೊಸಳೆ ಬಬಿಯಾ ಅಂತ್ಯ ಸಂಸ್ಕಾರ

- Advertisement -
- Advertisement -

ಕುಂಬಳೆ: ನಿನ್ನೆ ರಾತ್ರಿ ಮೃತಪಟ್ಟಿದ್ದ ಅನಂತಪುರದಲ್ಲಿರುವ ಅನಂತ ಪದ್ಮನಾಭ ದೇವಸ್ಥಾನದಲ್ಲಿದ್ದ  ಬಬಿಯಾ ಮೊಸಳೆಯ ಅಂತಿಮ ವಿಧಿ ವಿಧಾನ ನೆರವೇರಿದೆ.

ದೇವಸ್ಥಾನದ ಮುಂಭಾಗದಲ್ಲಿ ಬಬಿಯಾ ಮೊಸಳೆಯ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಬಬಿಯಾ ಅಂತಿಮ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು. ಸಸ್ಯಹಾರಿ ಮೊಸಳೆ ಎಂದೇ ಪ್ರಖ್ಯಾತಿ ಪಡೆದಿದ್ದ ಬಬಿಯಾ,  ಕಳೆದ 70 ವರ್ಷಗಳಿಂದ ದೇವಸ್ಥಾನದ ಕೆರೆಯಲ್ಲಿತ್ತು ಎಂದು ಹೇಳಲಾಗುತ್ತಿತ್ತು.

ದೇವರ ಮೊಸಳೆ ಎಂದೇ ಪ್ರಖ್ಯಾತಿ ‌ಪಡೆದಿದ್ದ ಬಬಿಯಾ, ಎರಡು ವರ್ಷಗಳ ಹಿಂದೆ ಸರೋವರದ ನೀರಿನಿಂದ ಹೊರ ಬಂದು ದೇಗುಲ ಪ್ರವೇಶಿಸಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಬಬಿಯಾ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದ್ದು, ವೈದ್ಯರು ತಪಾಸಣೆ ನಡೆಸಿದ್ದರು. ಮೊನ್ನೆಯಿಂದ ಬಬಿಯಾ ನೈವೇದ್ಯ ಸೇವಿಸಲು ಬರದ ಕಾರಣ ಸ್ಥಳೀಯರು ಮತ್ತು ಆಡಳಿತ ಮಂಡಳಿಯಿಂದ ಹುಡುಕಾಟ‌ ನಡೆದಿತ್ತು. ನಿನ್ನೆ ರಾತ್ರಿ‌ 10 ಗಂಟೆ ವೇಳೆಗೆ ಸರೋವರದ ಬಳಿ ಬಬಿಯಾ ಮೃತದೇಹ ತೇಲಿ ಬಂದಿತ್ತು

- Advertisement -

Latest News

error: Content is protected !!