ಇಂದಬೆಟ್ಟು: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಗಾಡಿ ಅರಮನೆಯ ಬಂಗರಸರ ವಂಶಸ್ಥರಾದ ಬಿ. ರವಿರಾಜ್ ಬಲ್ಲಾಳ್ (103ವರ್ಷ) ರವರು ನಿಧನರಾಗಿದ್ದಾರೆ.
ಇವರು ಒಂದು ಹೆಣ್ಣು, ಎರಡು ಗಂಡು ಮಕ್ಕಳನ್ನು ಅಗಲಿದ್ದಾರೆ.
ರವಿರಾಜ್ ಬಲ್ಲಾಳ್ ಹಿನ್ನೆಲೆ: ರವಿರಾಜ ಬಲ್ಲಾಳ್ ಅವರು ಬಂಗಾಡಿ ಅರಮನೆಯನ್ನು ಸಂರಕ್ಷಿಸಿಕೊಂಡು ಬಂದಿದ್ದರು. ಅರಮನೆಯ ಕುರಿತಾದ ಲೇಖನಗಳನ್ನು ಕೂಡ ಇವರು ಬರೆದಿದ್ದರು. ಬಂಗರಸ ಕುರಿತು ʻಬಂಗ ಅರಸರ ಇತಿಹಾಸ’ ಪುಸ್ತಕವನ್ನು ಬರೆದು ಅದರಲ್ಲಿ ಬಂಗರಸ ಮೂಲ ಹಾಗೂ ಪರಿಚಯ, ಇವರ ಆಳ್ವಿಕೆಯಲ್ಲಿ ನಿರ್ಮಿಸಿದ ಶ್ರವಣಗುಂಡ, ಶಾಂತಿನಾಥ ಸ್ವಾಮಿಯ ಬಸದಿ, ಜೈನ ಅರಸರ ಕಾಲದಲ್ಲಿ ಇದ್ದ ಪದ್ಧತಿ, ದಕ್ಷಿಣ ಕನ್ನಡ ಜಿಲ್ಲೆಯನ್ನಾಲಿದ ಜೈನ ಅರಸರು, ಹೆಗ್ಗಡೆ ಹಾಗೂ ಬಲ್ಲಾಳರ ಸರ್ವಧರ್ಮದ ಕೊಡುಗೆ ಬಂಗರಸರ ಕಾಲದ ಕೆಲವು ಶಾಸನಗಳು ಶಾಸನದಲ್ಲಿರುವ ನೂನ್ಯತೆಯ ವಿವರ ಬಂಗರಸರ ವಂಶಾವಳಿ ಲಕ್ಷ್ಮಪ್ಪರಸ ಬಂಗರ ಸ್ವಾತಂತ್ರ್ಯ ಚಳುವಳಿಯ ಎಲ್ಲಾ ವಿವರವೂ ಲಕ್ಷ್ಮಪ್ಪ ಬಂಗರ ಸ್ವಾತಂತ್ರ್ಯ ಚಳುವಳಿಯ ಎಲ್ಲಾ ವಿವರಗಳನ್ನು ಬಿ.ರವಿರಾಜ್ ಬಲ್ಲಾಳರು ಸಂಶೋಧಿಸಿ ಅದರಲ್ಲಿ ದಾಖಲಿಸಿದ್ದಾರೆ.


