Thursday, June 4, 2026
Homeಕರಾವಳಿಉಡುಪಿಶಬರಿಮಲೆ ಯಾತ್ರೆಯ ವೇಳೆ ಉದ್ಯಾವರದ ಅಯ್ಯಪ್ಪ ಮಾಲಾಧಾರಿ ಹೃದಯಾಘಾತದಿಂದ ಸಾವು

ಶಬರಿಮಲೆ ಯಾತ್ರೆಯ ವೇಳೆ ಉದ್ಯಾವರದ ಅಯ್ಯಪ್ಪ ಮಾಲಾಧಾರಿ ಹೃದಯಾಘಾತದಿಂದ ಸಾವು

- Advertisement -
- Advertisement -

ಕಟಪಾಡಿ: ಶಬರಿಮಲೆ ಯಾತ್ರೆಯ ವೇಳೆ ಹೃದಯಾಘಾತದಿಂದ ಉಡುಪಿ ಜಿಲ್ಲೆ ಉದ್ಯಾವರದ ಅಯ್ಯಪ್ಪ ಸ್ವಾಮಿ ಮಂದಿರದ ಸದಸ್ಯ ಅಯ್ಯಪ್ಪ ಮಾಲಾಧಾರಿ ಸುರೇಶ್ ಬಂಗೇರ ಅವರು ಜ.16ರಂದು ಅಸುನೀಗಿದ್ದಾರೆ.

ಇವರು ಜ.14ರಂದು ಉದ್ಯಾವರದ ಮಂದಿರದಲ್ಲಿ ಪೂಜೆಯನ್ನು ಮುಗಿಸಿ ಸುಮಾರು 14 ಜನ ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆ ಯಾತ್ರೆಯನ್ನು ಕೈಗೊಂಡಿದ್ದರು.

ಉದ್ಯಾವರ ಸಂಪಿಗೆನಗರದ ನಿವಾಸಿಯಾಗಿರುವ ಅಯ್ಯಪ್ಪ ವೃತಧಾರಿ ಸುರೇಶ್ ಬಂಗೇರ ಅವರು ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದಾರೆ. ಸುರೇಶ್ ಬಂಗೇರ ಅವರು ಸುಮಾರು 28 ಬಾರಿ ಶಬರಿಮಲೆ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ್ದರು. ಈ ಬಾರಿಯ ಯಾತ್ರೆಯ ವೇಳೆ ಶಬರಿಮಲೆಯ ಗಣೇಶ ಬೆಟ್ಟ ಹತ್ತುವ ವೇಳೆ ಹೃದಯಾಘಾತವಾಗಿದೆ, ಕೂಡಲೇ ಪಂಪೆಯ ಚಿಕಿತ್ಸಾ ಕೇಂದ್ರಕ್ಕೆ ಕೊಂಡೊಯ್ಯಲಾಗಿದ್ದು, ಬಳಿಕ ಅಲ್ಲಿಂದ ಪಲ್ಲತ್ತಿಟ್ಟು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಜ.17ರಂದು ಪಾರ್ಥಿವ ಶರೀರ ಉದ್ಯಾವರಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಜೊತೆಗಿದ್ದವರು ತಿಳಿಸಿದ್ದಾರೆ.

- Advertisement -

Latest News

error: Content is protected !!