- Advertisement -
- Advertisement -
ಮಂಗಳೂರು : ಉದ್ಯಮಿ ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣದ ಎ1 ಆರೋಪಿ ಆಯೆಷಾ ಕೊನೆಗೂ ಅರೆಸ್ಟ್ ಆಗಿದ್ದಾಳೆ.
ಮುಮ್ತಾಜ್ ಆಲಿ ನಾಪತ್ತೆಯಾಗುತ್ತಿದ್ದಂತೆ ಅವರ ಸಹೋದರ ಹೈದರ್ ನಿನ್ನೆ ಕಾವೂರು ಪೊಲೀಸ್ ಠಾಣೆಯಲ್ಲಿ ರೆಹಮತ್, ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶೋಯೆಬ್ ಹಾಗೂ ಸಿರಾಜ್ ವಿರುದ್ದ ದೂರು ದಾಖಲಿಸಿದ್ದರು. ಇನ್ನು ಘಟನೆ ಬಳಿಕ ಎ1 ಆರೋಪಿ ಆಯೇಷಾ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕೇರಳಕ್ಕೆ ಪರಾರಿಯಾಗಿದ್ದಳು. ಇದೀಗ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಪ್ರಕರಣದ ಮತ್ತೋರ್ವ ಆರೋಪಿ ಆಯೇಷಾ ಪತಿ ಶೋಯೆಬ್ ನನ್ನು ಪೊಲೀಸರು ನಿನ್ನೆ ಬಂಧಿಸಿದ್ದರು. ಇಂದು ಎ1 ಆರೋಪಿ ಆಯೇಷಾ ಅಂದರ್ ಆಗಿದ್ದಾಳೆ.
- Advertisement -