Friday, November 8, 2024
Homeಉದ್ಯಮಇನ್ಸ್ಟಾಗ್ರಾಮ್‌ ಸರ್ವರ್ ಭಾರತದಾದ್ಯಂತ ಡೌನ್; ಬಳಕೆದಾರರು ಪರದಾಟ

ಇನ್ಸ್ಟಾಗ್ರಾಮ್‌ ಸರ್ವರ್ ಭಾರತದಾದ್ಯಂತ ಡೌನ್; ಬಳಕೆದಾರರು ಪರದಾಟ

spot_img
- Advertisement -
- Advertisement -

ನವದೆಹಲಿ: ಭಾರತದಾದ್ಯಂತ ಮೆಟಾ ಮಾಲೀಕತ್ವದ ಇನ್ಸ್ಟಾಗ್ರಾಮ್‌ ಸರ್ವರ್‌ ಡೌನ್ ಆಗಿದ್ದು, ಹಲವಾರು ಬಳಕೆದಾರರಿಗೆ ಅ.08 ಮಂಗಳವಾರದಂದು ಮುಂಜಾನೆ 11:15 ರಿಂದ ಇನ್ಸ್ಟಾಗ್ರಾಮ್‌ ಉಪಯೋಗಿಸುವ ವೇಳೆ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಕ್ರೌಡ್-ಸೋರ್ಸ್ ಔಟೇಜ್ ಟ್ರ್ಯಾಕಿಂಗ್ ಸರ್ವೀಸ್ ʼಡೌನ್‌ಡೆಕ್ಟರ್ʼ ವರದಿ ತಿಳಿಸಿದೆ.

ಇನ್ಸ್ಟಾಗ್ರಾಮ್‌ ನಲ್ಲಿ 64% ಕ್ಕಿಂತ ಹೆಚ್ಚು ಬಳಕೆದಾರರು ಅಪ್ಲಿಕೇಶನ್‌ ಲಾಗ್ ಇನ್ ಮಾಡುವಲ್ಲಿ ಸಮಸ್ಯೆಯನ್ನು ಎದುರಿಸಿದ್ದಾರೆ. 24% ಬಳಕೆದಾರರು ಸರ್ವರ್ ಸಂಪರ್ಕ ಸಮಸ್ಯೆಗಳನ್ನು ಎದುರಿಸಿದ್ದಾರೆ ಎಂದು ಡೌನ್‌ಡೆಕ್ಟರ್ ಡೇಟಾ ತಿಳಿಸಿದೆ. ಅನೇಕ ʼಎಕ್ಸ್‌ʼ ಬಳಕೆದಾರರು ಇನ್ಸ್ಟಾಗ್ರಾಮ್‌ ಡೌನ್‌ ಕುರಿತು ಸ್ಕ್ರೀನ್‌ ಶಾಟ್‌ ಹಂಚಿಕೊಂಡಿದ್ದಾರೆ. ‘Something went wrong ಎನ್ನುವ ಸ್ಕ್ರೀನ್‌ ಶಾಟ್‌ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್‌ ಓಪನ್‌ ಮಾಡಿದ್ರೆ ಹಳೆಯ ಫೀಡ್‌ ಗಳೇ ಕಾಣಿಸುತ್ತಿದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಜಗತ್ತಿನೆಲ್ಲೆಡೆ ಕಳೆದ ಜೂನ್‌ ತಿಂಗಳಿನಲ್ಲಿ ಮೆಟಾ ಒಡೆತನದ ಇನ್ಸ್ಟಾಗ್ರಾಮ್‌ ಸರ್ವರ್‌ ಸಮಸ್ಯೆ ಕಾಣಿಸಿಕೊಂಡಿತ್ತು.

- Advertisement -
spot_img

Latest News

error: Content is protected !!