Saturday, August 29, 2026
Homeಕರಾವಳಿಉಡುಪಿಮಳೆಯಿಂದ ಭೂ ಕುಸಿತದ ಬಗ್ಗೆ ಮುನ್ನೆಚ್ಚರಿಕೆ ವಹಿಸಿ: ದಕ್ಷಿಣ ಕನ್ನಡ ಮತ್ತು ಉಡುಪಿ ಡಿಸಿಗಳಿಗೆ ಸಿಎಂ...

ಮಳೆಯಿಂದ ಭೂ ಕುಸಿತದ ಬಗ್ಗೆ ಮುನ್ನೆಚ್ಚರಿಕೆ ವಹಿಸಿ: ದಕ್ಷಿಣ ಕನ್ನಡ ಮತ್ತು ಉಡುಪಿ ಡಿಸಿಗಳಿಗೆ ಸಿಎಂ ನಿರ್ದೇಶನ

- Advertisement -
- Advertisement -

ಬೆಂಗಳೂರು: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಳೆಯ ಕಾರಣದಿಂದ ಭೂ ಕುಸಿತ ಉಂಟಾಗುವ ಸಾಧ್ಯತೆ ಹೆಚ್ಚಿರುವ ಕಾರಣ ಮುನ್ನೆಚ್ಚರಿಕೆ ವಹಿಸುವಂತೆ ಡಿಸಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.

ಮಳೆ ಹಾನಿ ಕುರಿತ ವೀಡಿಯೋ ಕಾನ್ಫರೆನ್ಸ್ ನಲ್ಲಿ ಇಂದು ಸೂಚಿಸಿರುವ ಸಿಎಂ, ಭೂ ಕುಸಿತದಿಂದ ಸಾವು ಸಂಭವಿಸದಂತೆ ಜನರನ್ನು ಸ್ಥಳಾಂತರ ಮಾಡಲು ಸೂಚಿಸಿದ್ದಾರೆ.

ವಿಪತ್ತು ನಿರ್ವಹಣಾ ತಂಡದವರು ಈ ಕುರಿತು ಸಂಬಂಧಿಸಿದ ಜಿಲ್ಲೆಗಳಿಗೆ ಮಾಹಿತಿ ಒದಗಿಸುವಂತೆ ಸಿಎಂ ಸೂಚಿಸಿದ್ದಾರೆ. ಬೆಂಗಳೂರಿನ ಸಿಎಂ ಗೃಹ ಕಚೇರಿ ಕೃಷ್ಣಾದಿಂದ ನಡೆದ ವೀಡಿಯೋ ಕಾನ್ಫರೆನ್ಸ್ ನಲ್ಲಿ ದಕ್ಷಿಣ ಕನ್ನಡ ಡಿಸಿ ಡಾ. ಕೆ.ವಿ. ರಾಜೇಂದ್ರ ಮತ್ತು ಉಡುಪಿ ಡಿಸಿ ಕೂರ್ಮಾ ರಾವ್ ಪಾಲ್ಗೊಂಡಿದ್ದರು.

- Advertisement -

Latest News

error: Content is protected !!