Wednesday, June 24, 2026
Homeಕರಾವಳಿಪುತ್ತೂರು; ಪೊಲೀಸರಿಂದ ಬಿಜೆಪಿ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ; ಗಾಯಾಳು ಅವಿನಾಶ್ ಹೇಳಿದ್ದೇನು?

ಪುತ್ತೂರು; ಪೊಲೀಸರಿಂದ ಬಿಜೆಪಿ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ; ಗಾಯಾಳು ಅವಿನಾಶ್ ಹೇಳಿದ್ದೇನು?

- Advertisement -
- Advertisement -

ಪುತ್ತೂರು; ಪೊಲೀಸರಿಂದ ಬಿಜೆಪಿ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಗಾಯಾಳು ಅವಿನಾಶ್ ಹೇಳಿಕೆ ನೀಡಿದ್ದು, ನಾವು ಗೆಳೆಯರು ಯಾವಾಗಲೂ ಮನೆಯ ಪಕ್ಕದ ಕಟ್ಟೆಯಲ್ಲಿ ಕುಳಿತುಕೊಳ್ಳುತ್ತಿದ್ದೆವು. ಮೇ 15ರಂದು ಅಲ್ಲಿಯೇ ಕುಳಿತುಕೊಂಡಿದ್ದೆವು. ಈ ವೇಳೆ ಆಗಮಿಸಿದ ಪೊಲೀಸರು ನಿಮ್ಮ ಜೊತೆ ಮಾತನಾಡಲು ಇದೆ ಎಂದು ಹೇಳಿ ಠಾಣೆಗೆ ಕರೆದು ಕೊಂಡುಹೋದರು ಎಂದು ಹೇಳಿದ್ದಾರೆ.

ಮಂಜಲ್ಪಡ್ಪು ಸಮೀಪ ಇರುವ ಡಿವೈಎಸ್‍ಪಿ ಕಚೇರಿಗೆ ಹೋಗಿದ್ದ ಬಳಿಕ ಅಲ್ಲಿ ಪೊಲೀಸರು ಇದರಲ್ಲಿ ಅವಿನಾಶ್ ಯಾರು ಎಂದು ಕೇಳಿದರು. ನಾನೇ ಅವಿನಾಶ್ ಎಂದಾಗ ಬಾರೀ ಹಾರಾಡುತ್ತಿದ್ದಿಯಾ ಎಂದು ಹೇಳಿ ನನಗೆ ಹೊಡೆಯಲು ಆರಂಭಿಸಿದರು. ಬಳಿಕ ಡಿವೈಎಸ್‍ಪಿ ಅವರ ಚೇಂಬರ್ ಗೆ ಕರೆದೊಯ್ದು ಅಲ್ಲಿ ನನ್ನ ಬಟ್ಟೆಗಳನ್ನು ಬಿಚ್ಚಿ ತೊಡೆಗೆ, ಪಾದಕ್ಕೆ ಮತ್ತು ಕೆನ್ನೆಗೆ ಹೊಡೆದಿದ್ದಾರೆ ಎಂದು ಹೇಳಿದ್ದಾರೆ.

ಪುತ್ತೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಹಲ್ಲೆಗೊಳಗಾದ ಅವಿನಾಶ್ ರಾತ್ರಿ ವೇಳೆ ಅರುಣ್ ಪುತ್ತಿಲ ಠಾಣೆಗೆ ಬರದೆ ಇರುತ್ತಿದ್ದರೆ ಲಾಕಪ್ ಡೆತ್ ಆಗುತ್ತಿತ್ತು ಎಂದಿದ್ದಾರೆ.

- Advertisement -

Latest News

error: Content is protected !!