Thursday, June 4, 2026
Homeಕರಾವಳಿಬಂಟ್ವಾಳ; ರಿಕ್ಷಾ ನಿಲ್ಲಿಸಿ ಪ್ರತಿಭಟನೆಗೆ ತೆರಳಿದ ಚಾಲಕ; ವಾಪಾಸ್ ಬರುವಾಗ ಆಟೋ ಕಳ್ಳತನ

ಬಂಟ್ವಾಳ; ರಿಕ್ಷಾ ನಿಲ್ಲಿಸಿ ಪ್ರತಿಭಟನೆಗೆ ತೆರಳಿದ ಚಾಲಕ; ವಾಪಾಸ್ ಬರುವಾಗ ಆಟೋ ಕಳ್ಳತನ

- Advertisement -
- Advertisement -

ಬಂಟ್ವಾಳ; ಪ್ರತಿಭಟನೆಯಲ್ಲಿ ಭಾಗವಹಿಸಲು ಚಾಲಕ ಆಟೋ ರಿಕ್ಷಾವನ್ನು ನಿಲ್ಲಿಸಿ ಹೋದಾಗ ಕಳ್ಳರು ಕದ್ದೊಯ್ದ ಘಟನೆ ಬಿ.ಸಿ.ರೋಡಿನಲ್ಲಿ ನಡೆದಿದೆ.

ಬಂಟ್ವಾಳ ತಾಲೂಕು ಕಚೇರಿ ಮುಂಭಾಗ 400ಕೆವಿ ವಿದ್ಯುತ್ ಮಾರ್ಗ ವಿರೋಧಿಸಿ ರೈತಸಂಘ ಪ್ರತಿಭಟನೆ ಆಯೋಜಿಸಿತ್ತು. ಪ್ರತಿಭಟನೆಗೆ ಬಂದ ಆಟೋ ಚಾಲಕ ಬಿ.ಸಿ.ರೋಡಿನ ಲಯನ್ಸ್ ಭವನದ ಬಳಿ ಆಟೋವನ್ನು ನಿಲ್ಲಿಸಿದ್ದರು. ಪ್ರತಿಭಟನೆ ಮುಗಿಸಿ ಬರುವಷ್ಟರಲ್ಲಿ ರಿಕ್ಷಾವನ್ನು ಕದ್ದೊಯ್ದಿದ್ದಾರೆ.

 ಬೆಳಗ್ಗೆ 10.30ರ ವೇಳೆ ಅಟೋ ರಿಕ್ಷಾವನ್ನು ನಿಲ್ಲಿಸಿ, ರೈತರ ಪ್ರತಿಭಟನೆಗೆ ತೆರಳಿದ್ದಾರೆ. ಮಧ್ಯಾಹ್ನ 3.00 ಗಂಟೆಗೆ ಬಂದು ನೋಡುವಾಗ ರಿಕ್ಷಾ ಕಳವಾಗಿದೆ. ಈ ಕುರಿತು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಲಾಗಿದೆ.

- Advertisement -

Latest News

error: Content is protected !!