Sunday, May 5, 2024
Homeಕರಾವಳಿಕಾಸರಗೋಡಿನಲ್ಲಿ ಒಂದು ಅಪರೂಪ ವಿವಾಹ; 29 ಬಳಿಕ ಮತ್ತೊಮ್ಮೆ ಮದುವೆಯಾದ ಮುಸ್ಲಿಂ ದಂಪತಿ

ಕಾಸರಗೋಡಿನಲ್ಲಿ ಒಂದು ಅಪರೂಪ ವಿವಾಹ; 29 ಬಳಿಕ ಮತ್ತೊಮ್ಮೆ ಮದುವೆಯಾದ ಮುಸ್ಲಿಂ ದಂಪತಿ

spot_img
- Advertisement -
- Advertisement -

ಕಾಸರಗೋಡು;ಅಪರೂಪದ ವಿವಾಹವೊಂದಕ್ಕೆ ಕಾಸರಗೋಡು ಸಾಕ್ಷಿಯಾಗಿದೆ. ಇಲ್ಲಿನ ವಕೀಲ ಶುಕೂರ್‌ ಮತ್ತು ಡಾ.ಶೀನಾ ದಂಪತಿ 29 ವರ್ಷದ ಬಳಿಕ 2ನೇ ಬಾರಿಗೆ ವಿವಾಹವಾಗಿದ್ದಾರೆ.

ತಮ್ಮ ಹೆಣ್ಣುಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ದಂಪತಿ ಹೊಸದಾಗಿ ವಿಶೇಷ ವಿವಾಹ ಕಾಯ್ದೆಯಡಿ ತಮ್ಮ ಮದುವೆಯನ್ನು ನೋಂದಾಯಿಸಿಕೊಂಡಿದ್ದಾರೆ. ಶುಕೂರ್ ಮತ್ತು ಡಾ.ಶೀನಾ 1994ರ ಅಕ್ಟೋಬರ್‌ನಲ್ಲಿ ಮೊದಲ ವಿವಾಹವಾಗಿದ್ದರು.ಅವರಿಗೆ ಮೂವರು ಹೆಣ್ಣುಮಕ್ಕಳಿದ್ದಾರೆ. ಗಂಡು ಮಕ್ಕಳಿಲ್ಲ.

ಶರಿಯಾ ಕಾನೂನಿನ ಪ್ರಕಾರ ಅವರು ಮದುವೆಯಾಗಿದ್ದರು. ಆದರೆ ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ, ಪಿತ್ರಾರ್ಜಿತ
ಆಸ್ತಿಯ ಮೂರನೇ ಎರಡು ಭಾಗವಷ್ಟೇ ಅವರ ಹೆಣ್ಣುಮಕ್ಕಳಿಗೆ ಸಲ್ಲುತ್ತದೆ.ಅವರಿಗೆ ಗಂಡುಮಕ್ಕಳಿಲ್ಲದ ಕಾರಣ ಉಳಿದ ಆಸ್ತಿಯೆಲ್ಲ ಆ ವ್ಯಕ್ತಿಯ ಸಹೋದರರ ಪಾಲಾಗುತ್ತದೆ.ಆದ್ದರಿಂದ ತಾವು ತಮ್ಮ ಮಕ್ಕಳಿಗಾಗಿ ದುಡಿದು, ಉಳಿತಾಯ ಮಾಡಿಟ್ಟ ಆಸ್ತಿಯು ಹೆಣ್ಣು ಮಕ್ಕಳಿಗೆ ಸಿಗಲಿ ಎಂದು ದಂಪತಿ ತಮ್ಮ ಮದುವೆಯನ್ನು ವಿಶೇಷ ವಿವಾಹ ಕಾಯ್ದೆಯಡಿ ಮರುನೋಂದಣಿ ಮಾಡಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!