Wednesday, July 15, 2026
Homeಕರಾವಳಿಮಂಗಳೂರು; ಕಸಾಯಿ ಖಾನೆಗೆ ಕೊಂಡೊಯ್ಯುವಾಗ ಎಮ್ಮೆ ತಿವಿದು ಯುವಕ ಸಾವು

ಮಂಗಳೂರು; ಕಸಾಯಿ ಖಾನೆಗೆ ಕೊಂಡೊಯ್ಯುವಾಗ ಎಮ್ಮೆ ತಿವಿದು ಯುವಕ ಸಾವು

- Advertisement -
- Advertisement -

ಮಂಗಳೂರು: ಕಸಾಯಿ ಖಾನೆಗೆ ಕೊಂಡೊಯ್ಯುವಾಗ ಎಮ್ಮೆ ತಿವಿದು ಯುವಕ ಸಾವನ್ನಪ್ಪಿರುವ ಘಟನೆ ಕಾಸರಗೋಡಿನ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ.

ಚಿತ್ರದುರ್ಗದ ನಿವಾಸಿ ಸಾದಿಕ್ (22) ಮೃತ ಯುವಕ. ನಿನ್ನೆ ಸಂಜೆ ಮೊಗ್ರಾಲ್ ಪುತ್ತೂರಿನಲ್ಲಿ ಕಸಾಯಿಖಾನೆಗೆ ತಂದ ಎಮ್ಮೆಯನ್ನು ಇಳಿಸುತ್ತಿದ್ದಾಗ ಅದು ಹಗ್ಗ ತುಂಡರಿಸಿ ಓಡಿ ಹೋಗಿದೆ.ಎಮ್ಮೆಯನ್ನು ಹಿಡಿಯಲು ಹೋದ ಸಾದಿಕ್​ಗೆ ಕೊಂಬಿನಿಂದ ತಿವಿದಿದೆ.

ಹೊಟ್ಟೆಗೆ ಗಂಭೀರವಾಗಿ ಗಾಯಗೊಂಡಿದ್ದ ಸಾದಿಕ್​ನನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತು.ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

- Advertisement -

Latest News

error: Content is protected !!