Saturday, June 6, 2026
HomeUncategorizedಬಂಟ್ವಾಳ: ಫೇಕ್ ಆಪ್ ಗಳನ್ನು ನಂಬಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಆಟೋ ಚಾಲಕ

ಬಂಟ್ವಾಳ: ಫೇಕ್ ಆಪ್ ಗಳನ್ನು ನಂಬಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಆಟೋ ಚಾಲಕ

- Advertisement -
- Advertisement -

ಬಂಟ್ವಾಳ: ಫೇಕ್ ಆಪ್ ನಂಬಿ ಆಟೋ ಚಾಲಕ ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ಬಂಟ್ವಾಳದ ಸರಪಾಡಿ ಗ್ರಾಮದಲ್ಲಿ ನಡೆದಿದೆ.

ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ ಆ್ಯಪ್‌ ಬಳಸಿ ವಿವಿಧ ಖಾತೆಗಳಿಗೆ ಹಣ ಹೂಡಿಕೆ ಮಾಡಿ ಆಟೋ ಚಾಲಕ ಹರೀಶ್‌ಕುಮಾರ್‌ ಎಂಬವರು 4.65 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ .

ಹರೀಶ್ ಮೊಬೈಲ್ ಗೆ ಕಳೆದ ಡಿ. 20ರಂದು ಮೆಸೇಜ್ ಒಂದು ಬಂದಿತ್ತು. ಅದರಂತೆ ಅವರು ನಮ್‌ಜೀನಿಯಸ್‌ ಎ1 ಆ್ಯಪ್‌ ಡೌನ್‌ಲೋಡ್‌ ಮಾಡಿದ್ದರು. ಬಳಿಕ ಆ್ಯಪ್‌ ಮೂಲಕ ಹಣ ಹೂಡಿಕೆ ಮಾಡಿ ಲಾಭ ಗಳಿಸುವ ಉದ್ದೇಶದಿಂದ ಅಪರಿಚಿತರು ವಾಟ್ಸ್‌ಆಪ್‌ನಲ್ಲಿ ಸೂಚಿಸಿದ ವಿವಿಧ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 5,85,200 ರೂ.ಗಳನ್ನು ವರ್ಗಾಯಿಸಿದ್ದರು.

ಅದರಲ್ಲಿ ಹರೀಶ್‌ ಅವರಿಗೆ 1,20,175 ರೂ.ಗಳನ್ನು ಹಿಂದಿರುಗಿಸಲಾಗಿದ್ದು, ಉಳಿದ ಬಾಕಿ ಮೊತ್ತ 4,65,025 ರೂ.ಗಳನ್ನು ಹಿಂದಿರುಗಿಸದೇ ಮೋಸ ಮಾಡಿದ್ದಾರೆ ಎಂದು ಪೊಲೀಸ್‌ ದೂರಿನಲ್ಲಿ ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

- Advertisement -

Latest News

error: Content is protected !!